ಬಿಜೆಪಿ ಮುಖಂಡರ ಬಗ್ಗೆ ಆರೋಪ ಮಾಡುವ ರೀತಿಯಲ್ಲಿ ಮಾತನಾಡಿರುವ ಕೆಡಿಪಿ ಸದಸ್ಯ ಅಬ್ದುಲ್ ಕುಂಞ ಬಿಜೆಪಿ ಪಕ್ಷದಿಂದ ಉಚ್ಚಾಟನೆ;


ಪುತ್ತೂರು: ಜನಪ್ರತಿನಿಧಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸೇರಿದಂತೆ ವಿವಿಧ ರಾಜಕಾರಣಿಗಳ ಬಗ್ಗೆ ವಿರುದ್ಧವಾಗಿ ಮಾತನಾಡಿರುವ ಆರೋಪದ ಮೇಲೆ ಕೆಡಿಪಿ ಸದಸ್ಯ ಅಬ್ದುಲ್ ಕುಂಞ ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ತಿಳಿಸಿದ್ದಾರೆ.
ಬಿಜೆಪಿ ಬೆಂಬಲಿತ ಕೆಡಿಪಿ ಸದಸ್ಯ ಅಬ್ದುಲ್ ಕುಂಞ ರವರು ಮಾತನಾಡಿದ್ದಾರೆನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆಡಿಯೋದಲ್ಲಿ ಜನಪ್ರತಿನಿಧಿಗಳು ಮತ್ತು ಬಿಜೆಪಿ
ಮುಖಂಡರ ವಿರುದ್ಧವಾಗಿ ಮಾತನಾಡಿದ್ದರು ಮತ್ತು ಜಿಲ್ಲೆಯಲ್ಲಿ ನಡೆದ ವಿವಿಧ ಕೊಲೆ ಇನ್ನಿತರ ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ ಎನ್ನುವ ರೀತಿಯಲ್ಲಿ ಮತೊಬ್ಬರೊಡನೆ ಮಾತನಾಡಿದ್ದರು ಎಂದು ಇವರು ಕರೆ ಮಾಡಿರುವ ಆಡಿಯೊ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ಬಿತ್ತರಗೊಂಡಿದ್ದವು, ಇದರಿಂದ ಬಿಜೆಪಿ ಪಕ್ಷಕ್ಕೆ ಜಿಲ್ಲೆಯಲ್ಲಿ ಮುಜುಗರ ಉಂಟಾಗಿತ್ತು ಇದರಿಂದ ಪಕ್ಷ ಮತ್ತು ಪಕ್ಷ ನಾಯಕರ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಹಿನ್ನಲೆಯಲ್ಲಿ ಪಕ್ಷ ಶಿಸ್ತು ಕ್ರಮಕೈಗೊಂಡಿದೆ.
ಆದರೆ ಅಬ್ದುಲ್ ಕುಂಞಿ ಈ ಆರೋಪವನ್ನು ವಿರೋಧಿಸಿ ಈ ಆಡಿಯೋ ನನ್ನದಲ್ಲ ಎಂದು ಪಕ್ಷ ಮುಖಂಡರಿಗೆ ಹೇಳಿದ್ದರೂ ಆದರೂ ಇದೀಗ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.