ನಾಯಿಗೆ ಡಿಕ್ಕಿ ಹೊಡೆದ ಕಾರು:ಸುಮಾರು 70 ಕಿ.ಮೀ. ಸಾಗಿದ್ರೂ ಬದುಕುಳಿಯಿತು ಬಡ ಶ್ವಾನ.

ನಾಯಿಗೆ ಡಿಕ್ಕಿ ಹೊಡೆದ ಕಾರು:ಸುಮಾರು 70 ಕಿ.ಮೀ. ಸಾಗಿದ್ರೂ ಬದುಕುಳಿಯಿತು ಬಡ ಶ್ವಾನ.

ಪುತ್ತೂರು: ನಾಯಿಯೊಂದಕ್ಕೆ ಕಾರು ಡಿಕ್ಕಿ ಹೊಡೆದು
ಕಾರಿನ ಬಂಪರ್ ಒಳಗೆ ಸಿಕ್ಕಿ ಹಾಕಿಕೊಂಡ ಘಟನೆ
ನಡೆದಿದ್ದು, ಕಾರು ಸುಮಾರು 70 ಕಿಲೋ ಮೀಟರ್
ಸಾಗಿದರು ನಾಯಿ ಬದುಕುಳಿದಿದೆ.ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರ ಕಾರಿಗೆ ನಾಯಿ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಡಿಕ್ಕಿ ಹೊಡೆದಿತ್ತು, ಕೂಡಲೇ ಕೆಳಗೆ ಇಳಿದ ದಂಪತಿ ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ನಾಯಿ ಮಾತ್ರ ನಾಪತ್ತೆಯಾಗಿತ್ತು.

ಈ ಹಿನ್ನಲೆ ಕಾರನ್ನು ಚಲಾಯಿಸಿಕೊಂಡು ಪುತ್ತೂರಿಗೆ ಆಗಮಿಸಿದ್ದಾರೆ ಮನೆಗೆ ಆಗಮಿಸಿ ಕಾರನ್ನು ಪರಿಶೀಲಿಸಿದಾಗ ಕಾರಿನ
ಬಂಪರ್ ಒಳಗೆ ನಾಯಿ ಸಿಕ್ಕಿ ಹಾಕಿಕೊಂಡಿತ್ತು. ಕೂಡಲೇ ಕಾರಿನ ಮೆಕ್ಯಾನಿಕ್ ಅನ್ನು ಕರೆಸಿ ಬಂಪರನ್ನು ತೆಗೆದಾಗ ನಾಯಿ ಅದರೊಳಗೆ ಸಿಲುಕಿಕೊಂಡಿತ್ತು. ಕಾರು 70 ಕಿಲೋ ಮೀಟರ್ ಕ್ರಮಿಸಿದರೂ ಕೂಡ ನಾಯಿಗೆ ಮಾತ್ರ ಸಣ್ಣ ಗಾಯ ಕೂಡ ಆಗಿಲ್ಲ, ಆಶ್ಚರ್ಯಕರ ರೀತಿಯಲ್ಲಿ ನಾಯಿ ಪಾರಾಗಿತ್ತು.

ರಾಜ್ಯ