ಜ.21-22 ರಂದು‌ ಸುಳ್ಯದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ.ಕಾರ್ಯಕ್ರಮ ಯಶಸ್ಸಿಗಾಗಿ ಸಮಿತಿ ರಚನೆ.

ಜ.21-22 ರಂದು‌ ಸುಳ್ಯದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ.ಕಾರ್ಯಕ್ರಮ ಯಶಸ್ಸಿಗಾಗಿ ಸಮಿತಿ ರಚನೆ.

ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇವರ ಸಹಯೋಗದಲ್ಲಿ ನಡೆಯುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2022-23ನೇ ಸಾಲಿನ ಯುವಜನ ಮೇಳದ ಪೂರ್ವಭಾವಿ ಸಭೆ ಯುವಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ನಡೆಯಿತು.ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಳ ಸಭಾಧ್ಯಕ್ಷತೆ ವಹಿಸಿದ್ದರು.ಯುವ ಸಬಲೀಕರಣ ಇಲಾಖೆಯ ಸುಳ್ಯ ತಾಲೂಕಿನ ನೋಡಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಯುವಜನ ಮೇಳದ ಆಯೋಜನೆಯ ಬಗ್ಗೆ ಮಾಹಿತಿ ನೀಡಿದರು.ಮಂಡಳಿಯ ಗೌರವಾಧ್ಯಕ್ಷ ದಯಾನಂದ ಕೇರ್ಪಳ ಹಾಗೂ ಕಾರ್ಯದರ್ಶಿ ಸಂಜಯ ನೆಟ್ಟಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭೆಯಲ್ಲಿ
ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷರಾದ ಮನಮೋಹನ್ ಪುತ್ತಿಲ , ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್ಲು, ಪಿ.ಎಸ್.ಗಂಗಾಧರ್,ದೀಪಕ್ ಕುತ್ತಮೊಟ್ಟೆ, ಶಿವಪಕಾಶ್ ಕಡಪಳ,ಶಂಕರ ಪೆರಾಜೆ, ಉಪಾಧ್ಯಕ್ಷರುಗಳಾದ ಗಳಾದ ವಿಜಯಕುಮಾರ್ ಉಬರಡ್ಕ,ಪ್ರವೀಣ್ ಕುಮಾರ್ ಎ.ಎಂ,ಕೋಶಾಧಿಕಾರಿ ಮುರಳಿ ನಳಿಯಾರು, ನಿರ್ದೇಶಕರುಗಳಾದ ರಾಜೀವಿ ಲಾವಂತಡ್ಕ ದಯಾನಂದ ಪಾತಿಕಲ್ಲು, ಸುಬ್ರಮಣಿ.ಪಿ.ವಿ
ಯುವಜನ ಸೇವಾ ಸಂಸ್ಥೆಯ ನಿರ್ದೇಶಕರಾದ ಹರೀಶ್ ರೈ ಉಬರಡ್ಕ, ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕರಾದ ಸುರೇಶ್ ಕಾಮತ್ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಯುವಜನ ಮೇಳದ ಆಯೋಜನೆಯ ಬಗ್ಗೆ-ಸಿದ್ಧತೆಗಳ ಬಗ್ಗೆ ಚರ್ಚಿಸಿ ಯುವಜನ ಮೇಳವು ಯಶಸ್ವಿಯಾಗಿ ನಡೆಯಲು ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಸಚಿವರಾದ ಶ್ರೀ ಎಸ್.ಅಂಗಾರ,ಅಧ್ಯಕ್ಷರಾಗಿ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿನಯಕುಮಾರ್ ಕಂದಡ್ಕ,
ಕಾರ್ಯಾಧ್ಯಕ್ಷರಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ರಾದ ತೇಜಸ್ವಿ ಕಡಪಳರನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ
ಡಾ.ಕೆ.ವಿ ಚಿದಾನಂದ, ಶ್ರೀಮತಿ ಮೀನಾಕ್ಷಿ ಗೌಡ, ಸೀತಾರಾಮ ರೈ ಸವಣೂರು,ಡಾ.ರೇಣುಕಾ ಪ್ರಸಾದ್,ಜಯಪ್ರಕಾಶ್ ರೈ ಚೊಕ್ಕಾಡಿ, ಎ.ವಿ.ತೀರ್ಥರಾಮ, ಜಾಕೆ ಮಾಧವ ಗೌಡ,ಮೋಹನ್ ರಾಂ ಸುಳ್ಳಿ, ನಿತ್ಯಾನಂದ ಮುಂಡೋಡಿ, ಕೆ.ಆರ್ ಪದ್ಮನಾಭ, ವೀರಪ್ಪ ಗೌಡ ಕಣ್ಕಲ್, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಭವಾನಿಶಂಕರ್, ಎಂಬಿ.ಸದಾಶಿವ, ತಹಶೀಲ್ದಾರ್ ಅನಿತಾ ಲಕ್ಷ್ಮಿ, ಶಿಶು ಅಭಿವೃದ್ಧಿ ಅಧಿಕಾರಿ ರಶ್ಮಿ ನೆಕ್ರಾಜೆರವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಪ್ರಧಾನ ಸಂಚಾಲಕರಾಗಿ ದೀಪಕ್ ಕುತ್ತಮೊಟ್ಟೆ,ಸಹ ಸಂಚಾಲಕರಾಗಿ ಸಂಜಯ್ ನೆಟ್ಟಾರು ಹಾಗೂ ರಾಜೀವಿ ಲಾವಂತಡ್ಕ ಉಪಾಧ್ಯಕ್ಷರುಗಳಾಗಿ ಭಾಗೀರಥಿ ಮುರುಳ್ಯ,ಚಂದ್ರಶೇಖರ ಪನ್ನೆ,
ಕಾರ್ಯಕ್ರಮ ಸಂಯೋಜನೆ ಸಮಿತಿಯ ಸಂಚಾಲಕರಾಗಿ ದಿನೇಶ್ ಮಡಪ್ಪಾಡಿ,ಸದಸ್ಯರಾಗಿ ದಯಾನಂದ ಕೇರ್ಪಳ.
ಆರ್ಥಿಕ ಸಮಿತಿಯ ಸಂಚಾಲಕರಾಗಿ ಮುರಳಿ ನಳಿಯಾರು,ಸದಸ್ಯರಾಗಿ ಹರೀಶ್ ರೈ ಉಬರಡ್ಕ, ಶೈಲೇಶ್ ಅಂಬೆಕಲ್ಲು, ಕೇಶವಪ್ರಸಾದ್ ತೊಡಿಕಾನ,ಹಮೀದ್ ಇಡ್ನೂರು,ಗೋಕುಲದಾಸ್ ಸುಳ್ಯ, ವಿಶ್ವ ನಾಥ ಜಾಕೆ,ಲಕ್ಷ್ಮಿ ನಾರಾಯಣ ಕಜೆಗದ್ದೆ,ದಿಲೀಪ್ ಬಾಬ್ಲುಬೆಟ್ಟುಆಹಾರ ಸಮಿತಿಯ ಸಂಚಾಲಕರಾಗಿ ಮನಮೋಹನ್ ಪುತ್ತಿಲಸದಸ್ಯರಾಗಿ ಶಿವಪ್ರಕಾಶ್ ಕಡಪಳ ಹಾಗೂ ಸತೀಶ್ ಮೂಕಮಲೆ
ಅತಿಥಿ ಸತ್ಕಾರ – ವಸತಿ ಸಮಿತಿಯ ಸಂಚಾಲಕರಾಗಿ ಶಂಕರ ಪೆರಾಜೆಸದಸ್ಯರಾಗಿ ವಿಜಯಕುಮಾರ್ ಉಬರಡ್ಕ, ನಮಿತಾ ಹರ್ಲಡ್ಕ, ಸುಧಾರಾಣಿ ಮುರುಳ್ಯ, ತುಳಸಿ ಕೇವಳ ಮೆರವಣಿಗೆ ಸಮಿತಿಯ ಸಂಚಾಲಕರಾಗಿ ಪ್ರವೀಣ್ ಕುಮಾರ್. ಎ.ಎ ಸದಸ್ಯರಾಗಿ ಅನಿಲ್ ಪೂಜಾರಿಮನೆ,ದಯಾನಂದ ಪಾತಿಕಲ್ಲು, ಆರ್.ಕೆ ಮಹಮ್ಮದ್ ಸ್ವಯಂ ಸೇವಾ ಸಮಿತಿಯ ಸಂಚಾಲಕರಾಗಿ ದಿನೇಶ್ ಹಾಲೆಮಜಲು ಸದಸ್ಯರಾಗಿ ರಾಜೀವಿ ಗೋಳ್ಯಾಡಿ,ವಿನುತಾ ಪಾತಿಕಲ್ಲು, ಸುಬ್ರಮಣಿ.ಪಿ.ವಿ
ಪ್ರಚಾರ ಸಮಿತಿಯ ಸಂಚಾಲಕರಾಗಿ ಪಿ.ಎಸ್.ಗಂಗಾಧರ್ ಸದಸ್ಯರಾಗಿ ಕೆ.ಟಿ.ವಿಶ್ವನಾಥ್, ಜನಾರ್ಧನ ನಾಗತೀರ್ಥ ಅಲಂಕಾರ ಸಮಿತಿಯ ಸಂಚಾಲಕರಾಗಿ ದಯಾನಂದ ಕೇರ್ಪಳ,ಸದಸ್ಯರಾಗಿ ಗುರುರಾಜ್ ಅಜ್ಜಾವರ,ಪವನ್ ಪಲ್ಲತಡ್ಕ,ಸುರೇಶ್ ಕಾಮತ್ ರವರುಗಳನ್ನು ಆಯ್ಕೆ ಮಾಡಲಾಯಿತು.ಮುಂದಿನ ದಿನಗಳಲ್ಲಿ ವಿವಿಧ ಸಮಿತಿಗಳ ಸಭೆ ಕರೆದು ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಬಗ್ಗೆ ಚರ್ಚಿಸುವುದೆಂದು ನಿರ್ಧರಿಸಲಾಯಿತು.ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ ಸ್ವಾಗತಿಸಿಕಾರ್ಯದರ್ಶಿ ಸಂಜಯ್ ನೆಟ್ಟಾರು ಧನ್ಯವಾದಗೈದರು.

Uncategorized