
ಸುಳ್ಯ ವೈದ್ಯರ ಬೈಕ್ ಕದ್ದೋಯ್ಯುತ್ತಿದ್ದ ವೇಳೆ ಸ್ಥಳೀಯರೇ ಕಳ್ಳನನ್ನು ಪೋಲಿಸರಿಗೆ ಒಪ್ಪಿಸಿರುವ ಘಟನೆ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಸೆ.22ರಂದು ವರದಿಯಾಗಿದೆ.

ಬೈಕ್ ಸವಾರನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯ ಯುವಕರು ಸೇರಿ ಬೈಕನ್ನು ಅಡ್ಡಗಟ್ಟಿ ಹಿಡಿದಿದ್ದು, ವಿಚಾರಣೆ ನಡೆಸುವ ವೇಳೆ ಬೈಕ್ ಕಳ್ಳತನ ಕೃತ್ಯ ಬಯಲಾಗಿದೆ.

KA19 W 1106 ನಂಬರಿನ ಸುಳ್ಯದಲ್ಲಿ ವೈದ್ಯರಾಗಿರುವ ಡಾ. ಭವಾನಿಶಂಕರರವರ ಹೋಂಡಾ ಸ್ಪ್ಲೆಂಡರ್ ಬೈಕನ್ನು ಸುಳ್ಯದಿಂದ ಕಳ್ಳತನ ಮಾಡಿ ಅಪರಿಚಿತ ವ್ಯಕ್ತಿಯೋರ್ವ ಸಂಶಯಾಸ್ಪದ ರೀತಿಯಲ್ಲಿ ಪುತ್ತೂರಿನ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಅನುಮಾನಗೊಂಡ ಸ್ಥಳೀಯರಾದ ಅಲ್ತಾಫ್ ಪೆರಾಜೆ, ಉನೈಸ್ ಪೈಚಾರು, ಶರೀಫ್ ಎ.ಕೆ., ಶಿಯಾಬು ಕೆ., ಮಹಮ್ಮದ್ ಸಿ ಹಾಗೂ ಸುಣ್ಣಮೂಲೆಯ ಪೂಪಿ ಅಬೂಬಕ್ಕರ್ ಅವರು ಸೇರಿ ತಡೆದು ನಿಲ್ಲಿಸಿ, ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ, ಆರೋಪಿಯನ್ನು ಯುವಕರು ಸೇರಿ ಸುಳ್ಯ ಪೊಲೀಸರ ವಶಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.