
ಕುಕ್ಕೆ ಸುಬ್ರಹ್ಮಣ್ಯ :ಸ,18, ಕಡಬ ತಾಲೂಕು, ಏನೇಕಲ್ಲು ಗ್ರಾಮದ ಹರೀಶ್. ಪಿ ಎಂಬವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹರೀಶ್. ಪಿ ಅವರ ಪತ್ನಿ,ಶ್ರೀಮತಿ ವೇದಾವತಿಯವರು ದಿನಾಂಕ:06.06.2024 ರಂದು ಮದ್ಯಾಹ್ನ ಸಮಯ ಅವರ ಒಟ್ಟು ಸುಮಾರು 84 ಗ್ರಾಂ ಚಿನ್ನಾಭರಣಗಳನ್ನು ಶುಚಿಗೊಳಿಸಿ, ಮನೆಯೊಳಗಿನ ಗೋಡ್ರೇಜ್ ಲಾಕರ್ನಲ್ಲಿ ಇರಿಸಿರುತ್ತಾರೆ. ದಿನಾಂಕ:17.09.2024 ರಂದು ಸಾಯಂಕಾಲ ಸಮಯ ವೇದಾವತಿ ಅವರು ಲಾಕರ್ ತೆರೆದು ನೋಡಿದಾಗ, ಗಾಡ್ರೇಜ್ ಲಾಕರ್ನೊಳಗೆ ಇರಿಸಿದ್ದ ಚಿನ್ನಾಭರಣಗಳನ್ನು ನೋಡುವಾಗ,ಚಿನ್ನಾಭರಣಗಳು ಕಾಣೆಯಾಗಿದ್ದು, ಚಿನ್ನಾಭರಣಗಳ ಅಂದಾಜು ಮೌಲ್ಯ 5,00,000/- ಆಗಿರುತ್ತದೆ. ಈ ಬಗ್ಗೆ ದಿನಾಂಕ:06.06.2024 ರಿಂದ ದಿನಾಂಕ:17.09.2024 ರ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿರವರ ಮನೆಗೆ ನುಗ್ಗಿ ಮನೆಯ ಒಳಗಿನ ಗಾಡ್ರೇಜ್ನ ಲಾಕರ್ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ: 45/2024 ಕಲಂ:305BNS ರಂತೆ ಪ್ರಕರಣ ಧಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ