ಬಾಡಿಗೆ ಮನೆಯಲ್ಲಿದ್ದು ಸಾಕಾಯ್ತು, ಜೀವನ ನಡೆಸುವುದೇ ಕಷ್ಟವಾಗಿದೆ, ಕೂಡಲೇ ನಿವೇಶಕೊಡಿಸಿ:ಸುಳ್ಯದಲ್ಲಿ ಆಶ್ರಯ ಯೊಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯ.

ಬಾಡಿಗೆ ಮನೆಯಲ್ಲಿದ್ದು ಸಾಕಾಯ್ತು, ಜೀವನ ನಡೆಸುವುದೇ ಕಷ್ಟವಾಗಿದೆ, ಕೂಡಲೇ ನಿವೇಶಕೊಡಿಸಿ:
ಸುಳ್ಯದಲ್ಲಿ ಆಶ್ರಯ ಯೊಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯ.

ಬಾಡಿಗೆ ಮನೆಯಲ್ಲಿದ್ದು ಸಾಕಾಯ್ತು, ಜೀವನ ನಡೆಸುವುದೇ ಕಷ್ಟವಾಗಿದೆ,ದುಡಿದ ದುಡ್ಡೆಲ್ಲಾ .. ಬಾಡಿಗೆ ಕಟ್ಟಲು ಕಳೆದು ಹೋಗುತ್ತಿದೆ ನಿವೇಶನಕ್ಕಾಗಿ ಅರ್ಜಿ ನೀಡಿ ಹಲವು ವರ್ಷಗಳಾಯ್ತು, ಸುಳ್ಯ ನಗರ ವ್ಯಾಪ್ತಿಯಲ್ಲಿ ೨೦ ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ೪೫೫ ಕುಟುಂಬಗಳು ಕಾಯುತಿದ್ದಾರೆ. ಆದ್ದರಿಂದ ಶಾಸಕರು ಈ ಕುರಿತು ಗಮನ ಹರಿಸಿ ಎರಡು ತಿಂಗಳೊಳಗೆ ಆಶ್ರಯ ಸಮಿತಿ ರಚಿಸಬೇಕು ಮತ್ತು ಈ ಸಮಿತಿಯಲ್ಲಿ ನಿವೇಶನಕ್ಕೆ ಹೋರಾಟ ಮಾಡುವ ಸದಸ್ಯನನ್ನು ಸೇರಿಸಿಕೊಂಡು ಅರ್ಹರಿಗೆ ನಿವೇಶನ ಕೊಡಿಸುವ ಕೆಲಸ ಮಾಡಬೇಕು” ಎಂದು ಸುಳ್ಯ ಆಶ್ರಯ ಯೊಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯ ಮಾಡಿದೆ.


ಡಿ.೩೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಿತಿ ಸಂಚಾಲಕ ರಶೀದ್ ಜಟ್ಟಿಪಳ್ಳ, ವಸತಿ ನಿವೇಶನ ನಿರಾಶ್ರಿತರಿಗೆ ಸರಕಾರದಿಂದ ಕೊಡಮಾಡುವ ಆಶ್ರಯ ಯೋಜನೆ ಅಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿ ನಗರ ಆಡಳಿತಕ್ಕೆ ನಿವೇಶನಕ್ಕೆ ಬೇಕಾಗಿ ಅರ್ಜಿ ಸಲ್ಲಿಸಿದ ಬಡ ಫಲಾನುಭವಿಯರೆಗೆ ವರುಷಗಳು ೨೦ ಕಳೆದರೂ ಯಾವುದೇ ನಿವೇಶನ ದೊರಕಿಲ್ಲ. ಇದಕ್ಕೆ ಸಂಬಂಧಿಸಿ ಫಲಾನುಭವಿಯರು ಅನೇಕ ಸಲ ನಗರ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲದಂತೆ ಆಗಿದೆ. ನಂತರ ಹೋರಾಟ ಸಮಿತಿ ರಚಿಸಿ ಸಮಿತಿ ಮುಖಾಂತರ ನಗರ ಆಡಳಿತ ಮತ್ತು ಸ್ಥಳೀಯ ಜನಪ್ರಗತಿ ನಿಧಿಗಳಿಗೆ ಒತ್ತಡ ಹಾಕುತ್ತಾ ಬಂದರೂ ನಿವೇಶನ ಹಂಚಲು ಸುಳ್ಯ ನಗರ ಭಾಗದಲ್ಲಿ ಸರಕಾರಿ ಜಾಗ ಇಲ್ಲ ಎಂಬ ಸಮಜಾಯಿಷಿ ಕೊಡುತ್ತಾ ಸತಾಯಿಸಿ ಫಲಾನುಭವಿಯರನ್ನು ಹಿಂದಕ್ಕೆ ಕಳುಹಿಸಿ ನಿರಾಶೆಗೆ ಒಳಪಡಿಸುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಹೋರಾಟ ಸಮಿತಿಯು ಸರಕಾರದಿಂದ ವಸತಿ ಯೋಜನೆಯಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿದ ಸರ್ವೆ ನಂಬ್ರ ೨೪/೧ಂ೧ ಮತ್ತು ಸರ್ವೆ ನಂಬ್ರ ೩೭೪/೨ ಎರಡೂ ಸರಕಾರಿ ನಿವೇಶನಗಳ ಭೂ ದಾಖಲಾತಿಯನ್ನು ಆಧಾರ ಸಹಿತ ತಾಲೂಕು ಕಛೇರಿಗೆ ನೀಡಿ ಆಗಿನ ತಹಶೀಲ್ದಾರರಾದ ಅನಿತಾಲಕ್ಷ್ಮಿಯವರು ಪರಿಶಿ ಸರ್ವೆಯನ್ನು ಮಾಡಿಸಿ, ಕಂದಾಯ ಪರಿಶೀಲಿಸಿ ಸರ್ವೆಯರ್ ಆದ ಜಗದೀಶ್ ಅವರಲ್ಲಿ ಇಲಾಖೆಯ ಕೆಲಸವನ್ನು ಮುಗಿಸಿ ನಗರ ಪಂಚಾಯತ್ ಆಡಳಿತಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ.

ಇದೀಗ ಮುಖ್ಯಾಧಿಕಾರಿಗಳನ್ನು ವಿಚಾರಿಸಿದಾಗ ಕಾರ್ಯ ಪ್ರಗತಿಯಲ್ಲಿದ್ದು, ಮುಂದೆ ಎರಡು ಸರ್ವೆ ನಂಬ್ರಗಳ ಸ್ಥಳಗಳನ್ನು ಸಮತಟ್ಟು ಮಾಡಲು ಈಗಾಗಲೇ ಟೆಂಡರ್ ಕರೆದಿದ್ದು, ಒಂದು ವಾರದೊಳಗೆ ಸಮತಟ್ಟಿನ ಕೆಲಸ ಆರಂಭಿಸಿ. ಅಲ್ಲಿ ಎಷ್ಟು ನಿವೇಶನ ಕೊಡಬಹುದು ಎಂಬ ನಿಟ್ಟಿನಲ್ಲಿ ನಾವು ಕಾರ್ಯ ಯೋಜನೆ ಮಾಡುತ್ತಿದ್ದೇವೆ.ಎಂದು ಹೇಳುತ್ತಿದ್ದಾರೆ. ಆದರೂ ನೂತನ ಶಾಸಕರ ಉಪಸ್ಥಿತಿಯಲ್ಲಿ ಆಶ್ರಯ ಸಮಿತಿಯನ್ನು ರಚಿಸಿ, ಹಂಚುವ ವಿಧಾನವನ್ನು ತಿಳಿಸಿರುತ್ತಾರೆ. ಆದ್ದರಿಂದ ಮಾನ್ಯ ಶಾಸಕರು ಆದಷ್ಟು ಬೇಗನೆ ಆಶ್ರಯ ಸಮಿತಿಯನ್ನು ರಚಿಸಲು ಸರ್ಕಾರವನ್ನು ಒತ್ತಾಯಿಸಿ, ಸುಮಾರು ೨೦ ವರ್ಷದಿಂದ ಮೇಲ್ಪಟ್ಟು ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಪೈಕಿ ಅರ್ಹರಿಗೆ ಆದಷ್ಟು ಬೇಗನೆ ನಿವೇಶನ ದೊರಕಿಸುವ ಕೆಲಸವನ್ನು ಸುಳ್ಯ ಶಾಸಕರು ಮಾಡಬೇಕು ಎಂದು ಆಗ್ರಹಿಸಿದರು,
ಹಲವು ವರ್ಷಗಳಿಂದ ಬಾಡಿಗೆ ಮನೆಯಲಿದ್ದು ನಿವೇಶನಕ್ಕಾಗಿ ಹಲವು ಭಾರಿ ಕಚೇರಿಗಳಿಗೆ ಅಲೆದಿದ್ದೇವೆ, ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ, ಇನ್ನು ನಿವೇಶನ ನೀಡದಿದ್ದರೆ, ಬದುಕು ದುಸ್ತರ ವಾಗಲಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಅರ್ಜಿ ಸಲ್ಲಿಸಿರುವ ರಾಜೇಶ್ವರ ಮಣಿಯಾಣಿ ಜೂನಿಯರ್ ಕಾಲೇಜು ಬಳಿ, ಪದ್ಮನಾಭ ನಾಯ್ಕ್ ಜಟ್ಟಿಪಳ್ಳ, ಕವಿತಾ ಅಶೋಕ್ ಜಟ್ಟಿಪಳ್ಳ, ಸಾವಿತ್ರಿ ಶಿವಶಂಕರ್ ಜಟ್ಟಿಪಳ್ಳ, ಮಮತಾ ಮೊದಲಾದವಿದ್ದರು.

ರಾಜ್ಯ