ಕಮ್ಮಾಡಿಯಲ್ಲಿ ನೂತನ ಟವರ್ ನಿರ್ಮಾಣಕ್ಕೆ ಕೇರಳ ಸರಕಾರ ಅಸ್ತು: ಸರ್ವೆಕಾರ್ಯ ನಡೆಸಿದ ಅಧಿಕಾರಿಗಳು:ಕರ್ನಾಟಕದ ಗಡಿ ಪ್ರದೇಶದ ನೆಟ್ವರ್ಕ್ ಸಮಸ್ಯೆ ದೂರ..?

ಕಮ್ಮಾಡಿಯಲ್ಲಿ ನೂತನ ಟವರ್ ನಿರ್ಮಾಣಕ್ಕೆ ಕೇರಳ ಸರಕಾರ ಅಸ್ತು: ಸರ್ವೆಕಾರ್ಯ ನಡೆಸಿದ ಅಧಿಕಾರಿಗಳು:
ಕರ್ನಾಟಕದ ಗಡಿ ಪ್ರದೇಶದ ನೆಟ್ವರ್ಕ್ ಸಮಸ್ಯೆ ದೂರ..?

ನೆಟ್ವರ್ಕ್ ಸಮಸ್ಯೆಯ ತೊಂದರೆ ಎದುರಿಸುತ್ತಿದ್ದ ಕಮ್ಮಾಡಿ ಕಲ್ಲಪಳ್ಳಿ ಗ್ರಾಮದ ಜನರ ಸಮಸ್ಯೆಗಳಿಗೆ ಕೇರಳ ಸರಕಾರ ಸ್ಪಂದನೆ ಮಾಡಿದ್ದು, ಕಮ್ಮಾಡಿಯಲ್ಲಿ ಬಿ ಎಸ್ ಎನ್ ಎಲ್ ಟವರ್ ನಿರ್ಮಾಣಕ್ಕೆ ಇಂದು ಅಧಿಕಾರಿಗಳ ತಂಡ ಸರ್ವೆ ಕಾರ್ಯ ಮಾಡಿದೆ ಎಂದು ತಿಳಿದು ಬಂದಿದೆ.


ಗರುಗುಂಜ ಶ್ರೀ ಜನಾರ್ದನ ಗೌಡ ಇವರ ಸ್ಥಳದಲ್ಲಿ ಮಂಜೂರಾತಿ ಆದ BSNL ಟವರಿಗೆ ಪಾಣತ್ತೂರು ವಿಲೇಜ್ ಆಫೀಸ್ ಇವರು 5 ಸೆಂಟ್ ಸ್ಥಳ ಅಳತೆ ಮಾಡಿ ಲೊಕೇಶನ್ ಪ್ಲೇನ್ ತಯಾರಿ ಮಾಡುವ ಸಂದರ್ಭದಲ್ಲಿ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ಅರುಣ್ ರಂಗತ್ತಮಲೆ, ಹಿರಿಯರಾದ ಶ್ರೀ ವೆಂಕಪ್ಪ ಗೌಡ ಗರುಗುಂಜ, ಶ್ರೀ ಯತೀಶ್, ಶ್ರೀ ವಿನಯ್ ಗರುಗುಂಜ, ಮತ್ತು ಕಲ್ಲಪಳ್ಳಿ BSNL ಟವರ್ ಆಪರೇಟರ್ ಅನಂತರಾಜ್ ಸಹಕರಿಸಿದರು. ಈ ನೂತನ BSNL ಟವರ್ ಸಂಪೂರ್ಣ ಸ್ವಯಂ ಚಾಲಿತವಾಗಿದ್ದು 4G ವೇಗ ಹೊಂದಿರಲಿದೆ,ಈ ಟವರ್ ನಿರ್ಮಾಣದಿಂದ , ಕೇರಳದ ಭೂ ಪ್ರದೇಶದ ಕಮ್ಮಾಡಿ, ಕಲ್ಲಪಳ್ಳಿ ಮಾತ್ರ ವಲ್ಲದೆ ಕರ್ನಾಟಕದ ಪೆರಾಜೆ ಗ್ರಾಮದ ನಿಡ್ಯಮಲೆ, ಕುಂಬಳ್ಚೇರಿ, ಕೂರ್ನಡ್ಕ, ಇನ್ನಿತರ ಸುತ್ತ ಮುತ್ತಲಿನ ನಿವಾಸಿಗಳ ನೆಟ್ವರ್ಕ್ ಸಮಸ್ಯೆ ಪರಿಹಾರ ಆಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯ