ರೋಯಲ್ ಫ್ರೆಂಡ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ ಗೂನಡ್ಕ ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮ.

ರೋಯಲ್ ಫ್ರೆಂಡ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ ಗೂನಡ್ಕ ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮ.

ಸಾಮಾಜಿಕ, ಶೈಕ್ಷಣಿಕ, ಕ್ರೀಡಾಕ್ಷೇತ್ರ ,ಸಾಂತ್ವನ ಕಾರ್ಯಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವ ರೋಯಲ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ
ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯೊಂದಿಗೆ, ಬಡವರ ಮೇಲೆ ವಿಶೇಷ ಕಾಳಜಿಯೊಂದಿಗೆ ಪುಣ್ಯ ರಮಳಾನ್ ತಿಂಗಳನ್ನು ಬಡತನದ ಬೇಗೆ ನಿವಾರಿಸುವ ನಿಟ್ಟಿನಲ್ಲಿ ಅರ್ಹರು ಸಂತೋಷದಿಂದ ಪುಣ್ಯ ರಮಳಾನ್ ತಿಂಗಳನ್ನು ಸ್ವಾಗತಿಸಲಿ ಎಂಬ ಸದುದ್ದೇಶದಿಂದ ಕೊಯನಾಡು, ಸಂಪಾಜೆ, ಕಲ್ಲುಗುಂಡಿ, ಗೂನಡ್ಕ,ಪೆರಾಜೆ, ಆರಂತೋಡು ಆಸುಪಾಸಿನಲ್ಲಿರುವ ಸುಮಾರು 65 ಕ್ಕೂ ಹೆಚ್ಚು ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಎ. 7 ರಂದು ರೋಯಲ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ (ರಿ) ಗೂನಡ್ಕ ದ ಕಚೇರಿ ಮುಂಭಾಗದಲ್ಲಿ ಚಾಲನೆ ನೀಡಲಾಯ್ತು..
ರೋಯಲ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಟ್ರಸ್ಟ್ (ರಿ) ಗೂನಡ್ಕ ಇದರ ಅಧ್ಯಕ್ಷರಾದ ಸಾಜೀದ್ ಐ. ಜಿ ರವರ ಮುಂದಾಳತ್ವದಲ್ಲಿ , ಸಲೀಂ ಪೆರಂಗೋಡಿ, ಶರೀಫ್ ಸೆಟ್ಟಿಯಡ್ಕ, ಇಜಾಸ್ ಗೂನಡ್ಕ, ಉಬೈಸ್ ಟಿ. ಕೆ, ಆಶಿಕ್ ಗೂನಡ್ಕ, ಯಹಿಯ ದೊಡ್ಡಡ್ಕ, ಹಾಗೂ ಸಮಿತಿಯ ಸದಸ್ಯರ ಸಹಕಾರದಿಂದ ಫಲಾನುಭವಿಗಳ ಮನೆಗಳಿಗೆ ತೆರಳಿ ರಮಳಾನ್ ಕಿಟ್ ನ್ನು ವಿತರಣೆ ಮಾಡಲಾಯ್ತು.

ರಾಜ್ಯ