ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ.

ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ.

ಕಾರವಾರ: ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಗೆ ಹಿಂದಿನಿಂದ ಬಾಕ್ಸೈಟ್ ಅದಿರು ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಏಳು ಲಕ್ಷ ಮೌಲ್ಯದ ಗೋವಾ ಮದ್ಯದ ಬಾಟಲಿಗಳು ರಸ್ತೆಗೆ ಬಿದ್ದು ನಾಶವಾದ ಘಟನೆ ಅಂಕೋಲ ತಾಲೂಕಿನ ತೊಡೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಗೋವಾದಿಂದ ಪಾಂಡಿಚೆರಿಗೆ ಕೊಂಡೊಯ್ಯುತಿದ್ದ ಗೋವಾ ಮದ್ಯದ ಲಾರಿಗೆ ಮಂಗಳೂರು ಕಡೆ ತೆರಳುತಿದ್ದ ಬಾಕ್ಸೈಟ್ ಅದಿರು ತುಂಬಿದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಚಾಲಕ ಸಹಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

ರಾಜ್ಯ