ಟರ್ಕಿ ಭೀಕರ ಭೂಕಂಪ,ಬೆಂಗಳೂರಿನ ಇಂಜಿನೀಯರ್ ಶವವಾಗಿ ಪತ್ತೆ.

ಟರ್ಕಿ ಭೀಕರ ಭೂಕಂಪ,ಬೆಂಗಳೂರಿನ ಇಂಜಿನೀಯರ್ ಶವವಾಗಿ ಪತ್ತೆ.


ನವದೆಹಲಿ: ಟರ್ಕಿ ಭೀಕರ ಭೂಕಂಪ ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಇಂಜಿನೀಯರ್ ಶವವಾಗಿ ಪತ್ತೆಯಾಗಿದ್ದಾರೆ.36 ವರ್ಷದ ವಿಜಯ್ ಕುಮಾರ್ ಟರ್ಕಿಯ ಪೂರ್ವ ಅನಾಟೊಲಿನಾದ ಮಲಾತ್ಯದಲ್ಲಿ ಪತ್ತೆಯಾಗಿದೆ. ವಿಜಯ್
ಕುಮಾರ್ ಉಳಿದುಕೊಂಡಿದ್ದ ಸ್ಟಾರ್ ಹೊಟೆಲ್
ನೆಲಸಮಗೊಂಡಿದೆ. ಇದರ ಅವಶೇಷಗಳಡಿ ವಿಜಯ್
ಕುಮಾರ್ ಶವ ಪತ್ತೆಯಾಗಿದೆ.


ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯದಲ್ಲಿರುವ
ಆ್ಯಕ್ಸಿಪ್ಲಾಂಟ್ ಕಂಪನಿಯಲ್ಲಿ ಎಂಜಿನೀಯರ್ ಆಗಿರುವ
ವಿಜಯ್ ಕುಮಾರ್ ಕೆಲಸದ ನಿಮಿತ್ತ ಟರ್ಕಿಗೆ ತೆರಳಿದ್ದರು.ಕೆಲ ದಿನಗಳ ಹಿಂದೆ ಟರ್ಕಿಗೆ ತೆರಳಿ ಕೆಲಸದಲ್ಲಿ
ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಆಕ್ಸಿಪ್ಲಾಂಟ್ ಕಂಪನಿ ವಿಜಯ್ ಕುಮಾರ್ ಅವರಿಗೆ ಉಳಿದುಕೊಳ್ಳಲು 24 ಅಂತಸ್ತಿನ ಸ್ಟಾರ್ ಹೊಟೆಲ್ ಅನ್ಸಾರಾ ಬುಕ್ ಮಾಡಿತ್ತು.ಕೆಲಸ ಮುಗಿಸಿ ಪ್ರತಿ ದಿನ ಹೊಟೆಲ್‌ಗೆ ಮರಳುತ್ತಿದ್ದ ವಿಜಯ್ ಕುಮಾರ್ ಭೂಕಂಪನದ ವೇಳೆ
ಹೊಟೆಲ್‌ನಲ್ಲಿ ಉಳಿದುಕೊಂಡಿದ್ದರು. 24 ಮಹಡಿಗಳ ಈ ಸ್ಟಾರ್ ಭೀಕರ ಭೂಕಂಪಕ್ಕೆ ನೆಲಸಮಗೊಂಡಿದೆ ಸಾವಿನ ಸಂಖ್ಯೆ 25,000ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯ,ಶೋಧ ಕಾರ್ಯಗಳು ಮುಂದುವರಿದಿದೆ. ಭಾರತದ ಎನ್‌ಡಿಆರ್‌ಎಫ್ ತಂಡ ಸತತ ಕಾರ್ಯಾಚರಣೆ ಮಾಡುತ್ತಿದೆ.

ರಾಜ್ಯ