ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವ  ಪ್ರಯುಕ್ತ ಮಹಿಳಾ ಸಮಾವೇಶ.

ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವ ಪ್ರಯುಕ್ತ ಮಹಿಳಾ ಸಮಾವೇಶ.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಪುರಸ್ಕೃತ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯುತ್ಸವ ಹಾಗೂ 10ನೇ ವರ್ಷದ ಸಂಸ್ಮರಣಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಚುಂಚಾದ್ರಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾದ ಶೋಭ ಕರಂದ್ಲಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, , ಸಮಾಜ ಸೇವೆಯಲ್ಲಿ ತೊಡಗಿರುವ ರೂಪ , ವೈದ್ಯಕೀಯ ಸೇವೆಯಲ್ಲಿರುವ ವಿದ್ಯಾ ಕೆ ಮೂರ್ತಿ ಮತ್ತು ಡಾ. ಪದ್ಮಾಕ್ಷಿ ಲೋಕೇಶ್ ರವರು, ಡಾ. ರಮ್ಯ ಹೆಚ್.ಆರ್ ರವರು, ಕ್ರೀಡಾ ಸೇವೆಯಲ್ಲಿರುವ ಕು. ಭಾಂದವ್ಯ ಹೆಚ್.ಎಂ., ಕು.ಶೃತಿ ಆರ್ ಮತ್ತು ವಿಶಾಲಾಕ್ಷಿ , ರೈತ ಮಹಿಳೆಯಾದ ಗೌರಮ್ಮ ನಂಜುಂಡಪ್ಪ ಮತ್ತು ಸೀಮಾಕೃಷ್ಣಾ ಪ್ರಸಾದ್ , ಶೈಕ್ಷಣಿಕ ಸೇವೆ ಶೋಭಾ ವೆಂಕಟರಮಣ, ಸಾಂಸ್ಕೃತಿಕ ಹಾಗೂ ಸಂಸ್ಕೃತ ಸೇವೆಯಲ್ಲಿರುವ ಕು. ಸುಮೇಧಿನಿ ರವರು, ಅರ್ಚನಾಗೌಡ ರವರು, ಸ್ವಯಂ ಉದ್ಯೋಗಿಯಾಗಿರುವ ಸರಸ್ವತಿ ಹಾಗೂ ಶ್ರೀ ಮಠದ ಸದ್ಭಕ್ತರು ಉಪಸ್ಥಿತರಿದ್ದರು.

ರಾಜ್ಯ