
ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಹೆಚ್ಚಿನ
ರೈತರು ತಮ್ಮ ಜೀವನಾಧಾರಕ್ಕೆ ಅಡಿಕೆಯೊಂದಿಗೆ ರಬ್ಬರ್ ಕೃಷಿಯನ್ನು ಅವಲಂಬಿಸಿದ್ದಾರೆ. ರಬ್ಬರಿನ ಪರ್ಯಾಯ ಕೃಷಿಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ . ಇತ್ತೀಚಿನ ರಬ್ಬರ್ ಮಾರುಕಟ್ಟೆಯಲ್ಲಿ ಉಂಟಾದ ದರ ಕುಸಿತವು ಕೃಷಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಶಾಸಕರಾದ

ಹರೀಶ್ ಪೂಂಜಾರವರ ನೇತೃತ್ವದಲ್ಲಿ ತೋಟಗಾರಿಕಾ
ಮಂತ್ರಿಗಳಾದ ಮುನಿರತ್ನರವರಿಗೆ ರಬ್ಬರಿಗೆ
ಬೆಂಬಲ ಬೆಲೆ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಗಳೊಂದಿಗೆ ಈ ನಿಟ್ಟಿನಲ್ಲಿ ಚರ್ಚಿಸಿ
ಶೀಘ್ರವಾಗಿ ರೈತರಿಗೆ ಅನುಕೂಲವಾಗುವಂತೆ ಬೆಂಬಲ
ಬೆಲೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಬೇಟಿಯ ಸಂಧರ್ಭದಲ್ಲಿ ರಬ್ಬರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ್ ಭಿಡೆ ಉಪಾಧ್ಯಕ್ಷರಾದ ಅನಂತ್ ಭಟ್ ಮಚ್ಚಿಮಲೆ,
ನಿರ್ದೇಶಕರಾದ ಶ್ರೀ ಪದ್ಮಗೌಡ ರಬ್ಬರ್ ಸೊಸೈಟಿ ಸಿ ಇ ಓ ರಾಜು ಶೆಟ್ಟಿ ಬೆಂಗತ್ಯರ್, ಕೆ ಎಸ್ ಎಂ ಸಿ ನಿರ್ದೇಶಕರಾದ ವಂದನೀಯ ಶಾಜಿ ಮಾತ್ಯು, ಕೆ ಎಸ್ ಎಂ ಸಿ ಎ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ, ಕೆ ಎಸ್ ಎಂ ಸಿ ಎ ಪ್ರದಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ
ಕೆ ಎಸ್ ಎಂ ಸಿ ಎ ಸದಸ್ಯರಾದ ಸೇಬಾಸ್ಟಿನ್ ಪಿ ಸಿ ಅವರು ಜೊತೆಗಿದ್ದರು.
