ಬದಿಯಡ್ಕದಲ್ಲಿ CPIM ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪ: ಇಬ್ಬರು ಆಸ್ಪತ್ರಗೆ ದಾಖಲು.

ಬದಿಯಡ್ಕದಲ್ಲಿ CPIM ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪ: ಇಬ್ಬರು ಆಸ್ಪತ್ರಗೆ ದಾಖಲು.

ಎಣ್ಮಕಜೆ ಪಂಚಾಯತ್‌ನ ಮಣಿಯಂಪಾರೆಯಲ್ಲಿ ನಿನ್ನೆ
ರಾತ್ರಿ ವಸಂತ, ರಾಜು, ಬಾಲು, ಮನೋಜ್ ಸೇರಿದಂತೆ 6ಮಂದಿ ಸಿಪಿಐಎಂ ಕಾರ್ಯಕರ್ತರು ಮಾರಕಾಸ್ತ್ರಗಳನ್ನು ಬಿಜೆಪಿ ಕಾರ್ಯಕರ್ತರನ್ನು ಆಕ್ರಮಿಸಿ ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಣಿಯಂಪಾರೆ ಜಯಂತ ನಾಯ್ಕರ ಮಗ ಸೂರ್ಯೋದಯ (19 ವಯಸ್ಸು), ಸಂಟನಡ್ಕ ಐತಪ್ಪ ನಾಯ್ಕರ ಮಗ ರೂಪೇಶ್ (26 ವಯಸ್ಸು) ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ