
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ನಿವಾಸಿಯಾದ ವಿಜಯಕುಮಾರ್ ಮತ್ತು ಪ್ರೇಮಲತಾ ದಂಪತಿಗಳ ಪುತ್ರ”ಹಾರ್ಧಿಕ್” ಪ್ರಾಯದ 4ನೇ ತರಗತಿಯಲ್ಲಿ ಕಲಿಯುತ್ತಿದ ಬಾಲಕ ಕೆಲವು ವರ್ಷಗಳಿಂದೀಚೆ ತೀವ್ರವಾದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ.ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಈಗಾಗಲೇ 2 ರಿಂದ 3ಲಕ್ಷ ಖರ್ಚಾಗಿದ್ದು ಈಗ ಮನೆಯಲ್ಲಿ ಇದ್ದಾರೆ , ಹಾಗೂ ಮುಂದಿನ ಚಿಕೆತ್ಸೆಗೆ ಸುಮಾರು 10ಲಕ್ಷ ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇವರ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾನೇ ಕಷ್ಟಕರವಾಗಿದ್ದು ಈ ಚಿಕ್ಕ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಅಶಕ್ತರಾದ್ದರಿಂದ,ಇವರ ಚಿಕಿತ್ಸಾವೆಚ್ಚಕ್ಕೆಂದು ಸಂಗ್ರಹಿಸಿದ 30,000/- ಸಾವಿರ ರೂಪಾಯಿಗಳನ್ನು ಇಂದು ನಮ್ಮ ಸಂಸ್ಥೆಯ ಸದಸ್ಯರಾದ ಮಹೇಶ್ ದೊಡ್ಡಮನೆ ಇವರು ತಾಯಿ ಮತ್ತು ಮಗುವಿನ ಕೈಯಲ್ಲಿ ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ಮಹೇಶ್ ದೊಡ್ಡಮನೆ ನಗರ ಪಂಚಾಯತ್ ಸದಸ್ಯರಾದ ಡೆವಿಡ್ ಧೀರ ಕ್ರಾಸ್ತಾ ಜೆಎಮ್‌ಜೆ ಮಾಲಕರಾದ ರೋಷನ್ ಡಿಸೋಜ ಮೊದಲಾದವರಿದ್ದರು.