
ಕಿಂಡಿ ಅಣೆಕಟ್ಟಿನಲ್ಲಿ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.೫ ರಂದು ಮಾಡಾವು
ಬೊಳಿಕ್ಕಳ ಗೌರಿ ಹೊಳೆಯಲ್ಲಿ ನಡೆದಿದೆ ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿದ್ದು,ಬೊಳಿಕ್ಕಳದಲ್ಲಿ
ಮಾಡಾವು ಸಂಬಂಧಿಕರ ಮನೆಯಲ್ಲಿರುವ ಹರೀಶ್ಚಂದ್ರ(45ವ) ರವರು ಮೃತಪಟ್ಟವರು.
ನಾಲ್ವರ ಬಳಗ ಸಂಜೆ ಬೊಳಿಕ್ಕ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರಿನಲ್ಲಿ ಸ್ನಾನಕ್ಕೆ ಹೋಗಿದ್ದರೆನ್ನಲಾಗಿದೆ. ಈ ವೇಳೆ ನೀರಿನಲ್ಲಿ
ಮುಳುಗಿ ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಸಂಪ್ಯ ಎಸ್ ಐ ರಾಮಕೃಷ್ಣ ಸಹಿತ ಸಿಬ್ಬಂದಿಗಳು ತೆರಳಿದ್ದಾರೆ.

