
ಗ್ರಾಮ ಪಂಚಾಯತ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಯಾವುದೇ ಭದ್ರತೆಯಿಲ್ಲದೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ , ಇಂತಹ ನೌಕರರನ್ನು ದುಡಿಸಿಕೊಳ್ಳಲಾಗುತ್ತಿದೆಯೇ ಹೊರತು ಯಾವುದೇ ನೌಕರಿ ಭದ್ರತೆಯಾಗಲಿ ಆರೋಗ್ಯಭದ್ರತೆ, ಸೌಲಭ್ಯವಾಗಲಿ ಇಲ್ಲ , ಇಂತಹ ನೌಕರರನ್ನು ಸರಕಾರ “ಸಿ” ಮತ್ತು “ಡಿ” ಧರ್ಜೆಯ ನೌಕರನ್ನಾಗಿ ಖಾಯಂ ಗೊಳಿಸ ಬೇಕು. ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಮಿತಿ ಜಿಲ್ಲಾದ್ಯಕ್ಷ ದಯಾನಂದ ಮಟೆತಡ್ಕ, ಹಾಗೂ ತಾಲೋಕು ಅದ್ಯಕ್ಷೆ ನೇತ್ರಾವತಿ ಒತ್ತಾಯಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇವರು ಈಗಾಗಲೆ ರಾಜ್ಯದಲ್ಲಿ 72000, ಜಿಲ್ಲೆಯಲ್ಲಿ, 1555, ತಾಲೋಕಿನಲ್ಲಿ 103 ಮಂದಿ ಪಂಚಾಯತ್ ಗಳಲ್ಲಿ ದುಡಿಯುತ್ತಿದ್ದು ಕಳೆದ ಮೂರು ದಶಕಗಳಿಂದ ಕನಿಷ್ಟ ವೇತನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಇದರಲ್ಲಿ ಕ್ಲಾರ್ಕ್, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ಪಂಪು ಚಾಲಕರು, ವಾಟರ್ ಮ್ಯಾನ್, ಶುಚಿತ್ವ ನೌಕರರು ಹೀಗೆ ವಿವಿಧ ಸ್ಥರಗಳಲ್ಲಿ ದುಡಿಯುತ್ತಿದ್ದೇವೆ, ಇಂತಹ ನೌಕರರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ1993 ರ ಪ್ರಕರಣ 112.ಮತ್ತು 113 ಕ್ಕೆ ತಿದ್ದುಪಡಿ ತಂದು ಪಂಚಾಯತ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಹುದ್ದೆಗಳಿಗೆ ಅನುಗುಣವಾಗಿ ” ಸಿ” ಮತ್ತು “ಡಿ” ಸ್ಥಾನಮಾನ ಮತ್ತು ವೇತನವನ್ನು ನೀಡಬೇಕು ಈ ಕಾರಣಕ್ಕಾಗಿ ರಾಜ್ಯ ವ್ಯಾಪಿಯಾಗಿ ಡಿ18 ರಿಂದ 25 ವರೆಗೆ ಒಂದು ವಾರಗಳ ಕಾಲ ಎಲ್ಲಾ ಸಿಬ್ಬಂದಿಗಳು ಸೇರಿ ಬೆಳಗಾವಿ ಸುವರ್ಣ ಸೌದದ ಎದುರು ದರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಹೇಳಿದರು.



ಈ ಸಂದರ್ಭದಲ್ಲಿ, ಸೀತಾರಾಮ ಮೊರಂಗಲ್ಲು ಆಲೆಟ್ಟಿ, ಯಶವಂತ, ಗಿರಿಧರ ಕೆ,ಕಳಂಜ ಜನಾರ್ಧನ ಉಬರಡ್ಕ, ಜಯರಾಮ ಕಲ್ಲುಪಣೆ ದೇವಚಳ್ಳ, ರಜೀಶ್ ಉಬರಡ್ಕ ಮೊದಲಾದವರಿದ್ದರು.

