ರಾಜ್ಯ

ರಿಕ್ಷಾ- ಕಾರು ನಡುವೆ ಭೀಕರ ಅಪಘಾತ : ಮಗು ಸೇರಿ ಐವರಿಗೆ ಗಂಭೀರ ಗಾಯ.


ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಿಂದ ಕಟೀಲು ಕ್ಷೇತ್ರಕ್ಕೆ ತೆರಳುತ್ತಿದ್ದ ಕಾರು ಮತ್ತು ರಿಕ್ಷಾ ಢಿಕ್ಕಿಯಾಗಿ ಐವರು ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಬೆಳ್ತಂಗಡಿಯ ಪೆರಿಂಜೆ ಬಳಿ ನಡೆದಿದೆ.

ತುಮಕೂರು ಮೂಲದ ಕುಟುಂಬವೊಂದು ಧರ್ಮಸ್ಥಳ ಕ್ಷೇತ್ರದ ದರ್ಶನ ಮುಗಿಸಿ ಕಟೀಲು ಕ್ಷೇತ್ರದ ಕಡೆಗೆ ಡಸ್ಟರ್‌ ಕಾರಿನಲ್ಲಿ ತೆರಳುತ್ತಿದ್ದು, ಇದೇ ವೇಳೆ ಪೆರಿಂಜೆ ತಲುಪುತ್ತಿದ್ದಂತೆ ಕಾಂನ್ನಂಗಾರ್ ನಿಂದ ಗೇರುಕಟ್ಟೆ ತೆರಳುತ್ತಿದ್ದ ರಿಕ್ಷಾ ಮುಖಾಮುಖಿಯಾಗಿ ಢಿಕ್ಕಿಯಾಗಿದೆ.

ಇನ್ನು ಅಪಘಾತದ ರಭಸಕ್ಕೆ ರಿಕ್ಷಾದಲ್ಲಿದ್ದ ಇಬ್ಬರು ಯುವತಿಯರು, ಮಗು ಹಾಗೂ ಓರ್ವ ಮಹಿಳೆ ಸೇರಿ ಐವರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಮಗುವಿಗೆ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಕಾರಿನ ಏರ್‌ಬ್ಯಾಗ್‌ ಓಪನ್‌ ಆಗಿದ್ದರಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Response

error: Content is protected !!