

ಮರ್ದೂರಡ್ಕ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿದಿಯಲ್ಲಿ ದಿನಾಂಕ ಡಿ.2. ರಂದು ಕುಣಿತ ಭಜನಾ ತರಭೇತಿ ಆರಂಭಗೊಂಡಿದೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು , ಅದ್ಯಕ್ಷರಾದ ಶ್ರೀ ಸುಂದರ ಗೌಡ ಬಿಳಿನೆಲೆಯವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಡಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹರಿ ನೂಚಿಲ ,ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಸೀತಾರಾಮ ಕೆಂಜೂರು ,ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ನೂಚಿಲ ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿಂತಿಕಲ್ಲು ವಲಯ ಮೇಲ್ವಿಚಾರಕಿ ಉಷಾ ಕಲ್ಯಾಣಿ, ಕಡಬ ಪ್ರಖಂಡ ಭಜರಂಗ ದಳ ಸಂಚಾಲಕ ಚೇತನ್ ದೋಳ್ತಿಲ, ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಜಾಲ್ತಾರು, ಎಡಮಂಗಲ ಸೇವಾ ಪ್ರತಿನಿಧಿ ರಾಮಣ್ಣ ಬಳಕ್ಕಬೆ ಮತ್ತು ಕಣಿತ ಭಜನೆ ತಂಡದ ಸದಸ್ಯರು ಉಪಸ್ಥಿಯಿದ್ದರು.


add a comment