

ಮಡಿಕೇರಿ ಫೆ.13 : ಹುಲಿದಾಳಿಯಿಂದ ಕಳೆದ
24 ಗಂಟೆಯಲ್ಲಿ ಇಬ್ಬರು ಕಾರ್ಮಿಕರು
ಸಾವನ್ನಪ್ಪಿದ್ದಾರೆ. ನಿನ್ನೆ ಪೊನ್ನಂಪೇಟೆ ತಾಲ್ಲೂಕಿನ ಚೂರಿಕಾಡು ಪಂಚಳ್ಳಿ ಗ್ರಾಮದ ಕಾರ್ಮಿಕ ಚೇತನ್ (18)
ನನ್ನು ಕೊಂದುಹಾಕಿರುವ ಹುಲಿ, ಇಂದು ಬೆಳಿಗ್ಗೆ ಬಾಡಗ ಗ್ರಾಮದ ಕಾರ್ಮಿಕ ರಾಜು (75) ಎಂಬವರನ್ನು ಬಲಿತೆಗೆದುಕೊಂಡಿದೆ.
ಹುಲಿದಾಳಿಗೆ ಇಬ್ಬರು ಬಲಿಯಾಗಿರುವುದರಿಂದ
ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಹುಲಿ
ಸೆರೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು
ಒತ್ತಾಯಿಸಿದ್ದಾರೆ.ಶಾಸಕ ಕೆ.ಜಿ.ಬೋಪಯ್ಯ ಅವರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹುಲಿ ಸೆರೆಗೆ ಅರಣ್ಯ ಇಲಾಖೆಗೆ ಅನುಮತಿ ನೀಡುವಂತೆ ಕೋರಲಿದ್ದಾರೆ.
add a comment