ರಾಜ್ಯ

ದಕ್ಷಿಣಕನ್ನಡದಲ್ಲಿ ಮರಳು ದಂಧೆಗೆ ಸರಕಾರಿ ಅಧಿಕಾರಿಗಳೇ ಹೊಣೆ: ಕಿಶೋರ್ ಶಿರಾಡಿ

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕರೆಕೊಟ್ಟಂತೆ 4000 ರೂಪಾಯಿಗಳಿಗೆ ಮರಳು ಪೂರೈಕೆ ಮಾಡಲು ಸಾಧ್ಯವಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಮಲೆನಾಡು ಜನಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಆರೋಪಿಸಿದರು.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿಯಲ್ಲಿ ಮರಳು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಬೆರಳೆಣಿಕೆಯ ಜನರಿಗೆ ಅನುಮತಿಯನ್ನು ನೀಡಿದೆ. ಆದರೆ ಅನುಮತಿ ಪಡೆದವರ ಸಂಖ್ಯೆಗಿಂತ ಅನಧಿಕೃತವಾಗಿ ಮರಳು ದಂಧೆ ಮಾಡುವವರ ಸಂಖ್ಯೆ ಇಲ್ಲಿ ಜಾಸ್ತಿಯಾಗಿದೆ. ಒಂದೋ ಇಲಾಖೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಅಕ್ರಮ ಮರಳು ದಂಗೆಯನ್ನು ನಿಲ್ಲಿಸಬೇಕು ,ಇಲ್ಲವೇ ಅಕ್ರಮವಾಗಿರುವ ಮರಳು ಅಡ್ಡೆಗಳನ್ನು ಅಧಿಕೃತ ಮಾಡಬೇಕೆಂದು ಒತ್ತಾಯಿಸಿದ ಅವರು ಇದರಿಂದ ಯಾರು ಬೇಕಾದರೂ, ಎಲ್ಲಿಂದ ಬೇಕಾದರೂ ಮರಳು ಪಡೆಯಲು ಸಾಧ್ಯವಿದೆ. ಒಂದು ಲಾರಿ ಮರಳು ಲೋಡ್ ಮಾಡಲು ಕಾರ್ಮಿಕರಿಗೆ 1800, ಟ್ರಾನ್ಸ್‌ಪೋರ್ಟ್‌ ಗೆ 1000 ಮತ್ತು ಸರಕಾರಿ ರಾಜಧನ 1000 ಮಾತ್ರ ವಿನಿಯೋಗವಾಗುತ್ತೆ. ಆದರೆ ಅಕ್ರಮವಾಗಿ ಮರಳು ತೆಗೆಯುವ ಮಂದಿ ಪ್ರಸ್ತುತ ಒಂದು ಲೋಡ್ ಮರಳಿಗೆ 12 ಸಾವಿರ ರೂಪಾಯಿಗಳನ್ನು ಮರಳುದಂಧೆಕೋರರು ಲೂಟಿ ಹೊಡೆಯುತ್ತಿದ್ದಾರೆ. ಈ ದಂಧೆಯು ಯಾವುದೇ ತೊಂದರೆಯಲ್ಲದೆ ನಡೆಯಲು ಸರಕಾರಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ ಅವರು ಸರಕಾರ ತಕ್ಷಣವೇ ಈ ವ್ಯವಸ್ಥೆಯ ಮೇಲೆ ಕಡಿವಾಣ ಹಾಕದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಮರಳು ವಿಚಾರದಲ್ಲಿ ಜಿಲ್ಲೆಯಲ್ಲಿ ರೌಡಿಸಂ ಹೆಚ್ಚಾಗಲಿದೆ ಎಂದರು. ಗ್ರಾಮಪಂಚಾಯತ್ ವಿ.ಎ ಯಿಂದ ಹಿಡಿದು ಉತ್ನತ ಮಟ್ಟದ ಅಧಿಕಾರಿಗಳು ಈ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಎಂದು ಅವರು ಆರೋಪಿಸಿದರು.

Leave a Response

error: Content is protected !!