ರಾಜ್ಯ

ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು : ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು.

ಬಂಟ್ವಾಳ: ಮನೆಗೆ ಬಾಗಿಲು ಹಾಕಿ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‌‌ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಬೀಜದಡಿ ನಿವಾಸಿ ಗುಣವತಿ ಎಂಬವರ ಮನೆಯಿಂದ ಕಳವಾಗಿದೆ.
ಸುಮಾರು 53. ಗ್ರಾಂ ತೂಕದ 2,12,000 ಮೌಲ್ಯದ ಚಿನ್ನಾಭರಣಗಳು ಕಳವು ಆಗಿದೆ.

ಜೂನ್ 15 ರಂದು ಗುಣವತಿ ಅವರು ಬೆಳಿಗ್ಗೆ 8.30 ರ ವೇಳೆಗೆ ಮನೆಯ ಹಿಂಬಾಗಿಲನ್ನು ಮುಚ್ಚಿ ಎದುರು ಬಾಗಿಲಿಗೆ ಬೀಗ ಹಾಕಿ ತೋಟದ ಕೆಲಸಕ್ಕೆ ಹೋಗಿದ್ದರು.

ಮಧ್ಯಾಹ್ನ 1.30 ಗಂಟೆಗೆ ಕೆಲಸ ಮುಗಿಸಿ ಊಟಕ್ಕೆ ಮನೆಗೆ ಬಂದಾಗ ಹಿಂಬಾಗಿಲು ತೆರದಿರುವುದು ಕಂಡು ಬಂದಿದೆ.

ಎದುರು ಬಾಗಿಲಿನ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿ ಗೋದ್ರೆಜ್ ನ ಬಾಗಿಲು ತೆರೆದುಕೊಂಡಿತ್ತು.ನೆಲದ ಮೇಲೆ ಬಟ್ಟೆಗಳು ಚೆಲ್ಲಿಪಿಲ್ಲಿಯಾಗಿತ್ತು.

‌ಗೋದ್ರೆಜ್ ನ ಸೇಪ್ ಲಾಕರ್ ತೆರೆದುಕೊಂಡಿದ್ದು, ಅದರೊಳಗೆ ಇರಿಸಲಾಗಿದ್ದ ಸುಮಾರು ನಾಲ್ಕುವರೆ ಪವನ್ ತೂಕದ ಕರಿಮಣಿ ಸರ, ಒಂದುವರೆ ಪವನ್ ತೂಕದ ಬೆಂಡೋಲೆ, ಅರ್ಧ ಪವನ್ ತೂಕದ ಪವನ್ ತೂಕದ ಬೆಂಡೋಲೆ , ಸುಮಾರು 3 ಗ್ರಾಂ ತೂಕದ ಗಣಪತಿ ಪದಕ, ಹಾಗೂ ಮೂಗುತ್ತಿ ಸೇರಿದಂತೆ ಒಟ್ಟು 53 ಗ್ರಾಂ ತೂಕದ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ

Leave a Response

error: Content is protected !!