ಬಜರಂಗದಳ ನಿಷೇಧ ಪ್ರಸ್ತಾಪಿಸಿದ್ದ ‘ಕೈ’ವಿರುದ್ಧ ಕಿಡಿಕಿಡಿ- ಕಾಂಗ್ರೆಸ್ ಪ್ರಣಾಳಿಕೆ ಪ್ರತಿ ಸುಟ್ಟು ಕಾರ್ಯಕರ್ತರ ಆಕ್ರೋಶ..!


ಮಂಗಳೂರು ಮೇ 02 : ಕಾಂಗ್ರೆಸ್ ಪಕ್ಷ ಇಂದು ಬಿಡುಗಡೆ ಮಾಡಿದ ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಕುರಿತು ಉಲ್ಲೇಖ ಮಾಡಿದ್ದು ಬಿಜೆಪಿ ಸೇರಿದಂತೆ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದು ಕಾಂಗ್ರೆಸ್ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿಯೂ ಕಾಂಗ್ರೆಸನ್ನು ತರಾಟೆಗೆ ತಗೊಂಡಿದ್ದಾರೆ, ಕಾಂಗ್ರೆಸ್ ವಿರುದ್ದ ಬಜರಂಗದಳ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸುತ್ತಿದ್ದು ಮಂಗಳೂರಿನಲ್ಲೂ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ವಿರುದ್ದ ಪ್ರತಿಭಟನೆ ನಡೆಸಿ ತೀವ್ರ ಆಕೋಶ ವ್ಯಕ್ತಪಡಿಸಿದರು.

ನಗರದಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಜರಂಗದಳದ ಕಾರ್ಯಕರ್ತರು ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಭಜರಂಗದಳ ನಿಷೇಧ ಮಾಡುತ್ತೇವೆ ಈ ಮೂಲಕ ಭಜರಂಗ ಕಾರ್ಯಕರ್ತರ ಕೆಲಸ ಕಾರ್ಯಗಳಿಗೆ ಅಂಕುಶ ಹಾಕುತ್ತೇವೆ, ಮಟ್ಟ ಹಾಕ್ತೆವೆ ಅಂದ್ರೆಅದು ಕೇವಲ ನಿಮ್ಮ ಭ್ರಮೆ, ಭಜರಂಗ ಆರಂಭವಾಗಿದ್ದೇ ಸಂಘರ್ಷದಿಂದ ಸಂಘರ್ಷಕ್ಕಾಗಿ. ಸೇವಾ ಸುರಕ್ಷ ಸಂಸ್ಕಾರ ಎಂಬ ದ್ಯೇಯ ವಾಕ್ಯವನ್ನು ಇಟ್ಟುಕೊಂಡು ಇಡೀ ದೇಶದಾದ್ಯಂತ ಭಜರಂಗ ದಳ ಕೆಲಸ ಮಾಡುತ್ತಿದೆ, ಭಜರಂಗ ದಳ ಯಾವತ್ತು ದೇಶ ವಿರೋದ ಕ್ರತ್ಯ ನಡೆಸಿಲ್ಲ, ಹಿಂದು ವಿರೋದಿ ಕ್ರತ್ಯ ನಡೆಸಿಲ್ಲ, ಅಮಾಯಕರಿಗೆ ಹಲ್ಲೆ ನಡೆಸಿಲ್ಲ, ಪೋಲಿಸ್ ಸ್ಟೇಷನ್ ಗೆ ಬೆಂಕಿ ಕೊಟ್ಟಿಲ್ಲ,ಆದರೂ ಕೂಡ ನಿಷೇಧ ಮಾಡ್ತೇವೆ ಎಂದು ಹೇಳಿ ತಿರುಗಾಡುತ್ತಾರೆ.
ಕೇವಲ ಮುಸ್ಲಿಂ ವೋಟ್ ಬ್ಯಾಂಕ್ ಗಾಗಿ , ಮುಸ್ಲಿಂ ತುಷ್ಟಿಕರಣಕ್ಕಾಗಿ ಇವತ್ತು ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲಾ ಸೇರಿಕೊಂಡು ಇವತ್ತು ಭಜರಂಗ ದಳ ನಿಷೇಧ . ಮಾಡುವುದಾದರೆ ನಾವು ಕೂಡ ಸಂಕಲ್ಪ ಮಾಡುತ್ತೇವೆ ಮತ್ತು ನಿಮಗೊಂದು ಸವಾಲನ್ನು ಹಾಕುತ್ತೇವೆ, ಕೇವಲ ಮುಸಲ್ಮಾನ ಓಲೈಕೆಗಾಗಿ ಯಾವುದೊ ಜಮಾಯಿತ್ ನ ಮುಸಲ್ಮಾನರ ಹೇಳಿಕೆ ಇಟ್ಟುಕೊಂಡು ಅಥವಾ ಎಸ್.ಡಿ.ಪಿ.ಐ ನ ಜೊತೆ ಸಂಧಾನ ಮಾಡಿಕೊಂಡು ಭಜರಂಗ ನಿಷೇದ ಮಾಡುವುದಾದರೆ ಇವತ್ತು ದಳದ ಎಲ್ಲಾ ಕಾರ್ಯಕರ್ತರು ರಾಷ್ಟ್ರೀಯ ಪಕ್ಷಕ್ಕಾಗಿ ಬಿ.ಜೆ.ಪಿ ಜೊತೆ ಸೇರಿಕೊಂಡು ಕಾಂಗ್ರೆಸ್ ಸೋಲಿಸುವ ಕೆಲಸ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ,
ಕಾಂಗ್ರೆಸ್ ಮುಖಂಡರು ಇತಿಹಾಸ ನೆನಪು ಮಾಡಬೇಕು, ಆ ರಾವಣ ಹನುಮಂತನನ್ನು ಕೆಣಕಿ ಲಂಕೆಯನ್ನೇ ಭಸ್ಮ ಮಾಡಿ ಬಿಟ್ಟ ಹಾಗೆಯೇ ಸಿದ್ದರಾಮಾಯ್ಯ, ಡಿಕೆಶಿ ಮತ್ತು ಅ ಕಾಂಗ್ರೆಸ್ ಮುಖಂಡರುಗಳು ಬಜರಂಗ ದಳ ಕೆಣಕಿದ್ದಾರೆ, ಕಾರ್ಯಕರ್ತರು ಎನು ಮಾಡುತ್ತಾರೆ ಎಂಬುದು ಮುಂದಿನ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ, ಹಾಗೆಯೆ ಎಲ್ಲಾ ಕಾರ್ಯಕರ್ತರು ಚುನಾವಣೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಅಭ್ಯರ್ಥಿಗಳ ವಿರುದ್ದವಾಗಿ ರಾಜಕೀಯ ಪಕ್ಷದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಹಿಂದುತ್ವದ ಪರವಾಗಿ ಇರುವ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ. ಕಾಂಗ್ರೆಸ್ ಹಾಕಿದ ಆ ಎಲ್ಲಾ ಸವಾಲುಗಳಿಗೆ ಉತ್ತರ ಕೊಡಲು ಬಜರಂಗ ದಳ ತಯಾರಿದೆ ಎಂದು ಇನ್ನೊಮ್ಮೆ ಸವಾಲನ್ನು ಹಾಕುತಿದ್ದೆವೆ, ನೀವು ಕೆಣಕಿ ಪ್ರಾರಂಭ ಮಾಡಿದ್ದೀರಾ ಅದರ ಅಂತ್ಯವನ್ನು ಕಾರ್ಯಕರ್ತರು ಮೇ 10 ರ ಚುನಾವಣೆ ದಿನದಂದು ಮಾಡಲಿದ್ದಾರೆ ಎಂದರು