ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ
ವಿರೋಧಿ ಚಟುವಟಿಕೆ ಆರೋಪದಡಿ ಕೆಪಿಸಿಸಿ ಸಂಯೋಜಕ ನಂದಕುಮಾರ್, ಎಂ ವೆಂಕಪ್ಪ ಗೌಡ, ಬಾಲಕೃಷ್ಣ ಬಲ್ಲೇರಿ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸು ನೀಡಿದ ಬ್ಲಾಕ್ ಕಾಂಗ್ರೇಸ್ : 17 ಮಂದಿ ಅಮಾನತು.


2023 ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ
ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬ
ಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್‌ರ
ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್
ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಹಾಗೂ ಐವರನ್ನು
ಅಮಾನತುಗೊಳಿಸಿ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ.ಸುಳ್ಯ ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಹೇಳಿಕೆಯ ಮೂಲಕ ಈ ಮಾಹಿತಿ ನೀಡಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಪಕ್ಷದ ಅಭ್ಯರ್ಥಿಯ ಮತ್ತು ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪಕ್ಷದ ರಾಷ್ಟ್ರೀಯ
ಅಧ್ಯಕ್ಷರು ಸುಳ್ಯಕ್ಕೆ ಬಂದಾಗ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ
ಜನರು ಬರದಂತೆ ಪ್ರಯತ್ನಿಸಿ ಸಭೆ ಸಮಾರಂಭಕ್ಕೆ ಗೈರು
ಹಾಜರಾಗಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಗೌರವ ತೋರಿದ
ಹಾಗೂ ನಂದಕುಮಾರ್ ಅಭಿಮಾನಿ ಬಳಗದೊಂದಿಗೆ
ಸೇರಿ ನಂದಕುಮಾರ್ ವಾಟ್ಸಾಪ್ ಮೆಸೇಜ್
ನಿರ್ದೇಶನದಂತೆ ಮತದಾರರನ್ನು ತಟಸ್ಥರಾಗಿರುವಂತೆ
ಪ್ರೇರೇಪಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ
ತೊಡಗಿಕೊಂಡಿರುವುದು ಸಾಬೀತಾಗಿರುವುದರಿಂದ. ಶ್ರೀಮತಿ ಉಪಾ ಆಂಚನ್, ಶ್ರೀಮತಿ
ಆಶಾ ಲಕ್ಷಣ್ ಗುಂಡ್ಯ ಶ್ರೀ ಪ್ರವೀಣ್ ಕೆಡಂಜಿ ಸವಣೂರು, ಶ್ರೀ ರವಿ ರುದ್ರಪಾದ,
ಶ್ರೀ ಶೋಬಿತ್ ಸುಬ್ರಮಣ್ಯ, ಶ್ರೀ ಸೇವಿಯರ್ ಬೇಬಿ, ಶ್ರೀ ಸುಧೀರ್ ಧೇವಾಡಿಗ, ಶ್ರೀ ಮಹೇಶ್
ಭಟ್ ಕರೀಕಳ, ಶ್ರೀ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಶ್ರೀ ಬವಾನಿ ಶಂಕರ್, ಶ್ರೀ ಗೋಕುಲ್
ದಾಸ್, ಶ್ರೀ ರಾಮ ಕೃಷ್ಣ ಕೆಂಜಾಳ, ಶ್ರೀ ಚೇತನ್ ಕಜೆಗದ್ದ, ಶ್ರೀ ಶಶಿಧರ್ ಮಾಸ್ಟರ್,
ಶ್ರೀ ಜೈನ್ ಆತೂರು, ಶ್ರೀ ಆನಂದ್ ಬೆಳ್ಳಾರೆ ಮತ್ತು ಶ್ರೀ ಫೈಜಲ್ ಕಡಬ ಇವರನ್ನು ಪಕ್ಷದ
ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಣೆ ಮಾಡಲಾಗಿದೆ.

ಹಾಗೂಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣಕರ್ತರಾದ ಪಕ್ಷದ ಸೋಲಿಗೆ ಕಾರಣರಾದ ಕೆ ಪಿ ಸಿ ಸಿ ಸಂಯೋಜಕ ನಂದಕುಮಾರ್, ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೇಸ್ ಮಾಜೀ ಅದ್ಯಕ್ಷ ಬಾಲಕೃಷ್ಣ ಬಲ್ಲೇರಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಕಾಂಗ್ರೆಸ್ ಮೂಲಕ ಪ್ರದೇಶ ಕಾಂಗ್ರೆಸ್‌ಗೆ ಮತ್ತು ಶಿಸ್ತು ಪಾಲನಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
