ರಾಜ್ಯ

ಕಾಸರಗೋಡು ದುಬೈ ಮಲಬಾರ್ ಸಾಂಸ್ಕ್ರತಿಕ ವೇಧಿಕೆ ವತಿಯಿಂದ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ “ಸಾಂಸ್ಕೃತಿಕ ರಾಯಭಾರಿ” ಪ್ರಶಸ್ತಿ ಪ್ರಧಾನ, ಸನ್ಮಾನ ಮತ್ತು ಓಣಂ ಹಬ್ಬ ಆಚರಣೆ.

ಕಾಸರಗೋಡು : ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ದುಬೈ ಮಲಬಾರ್ ಸಾಂಸ್ಕ್ರತಿಕ ವೇಧಿಕೆ ಕಾಸರಗೋಡು ಇದರ ವತಿಯಿಂದ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭ ಕಾಸರಗೋಡು ಬ್ಲಾಕ್ ಪಂಚಾಯತ್ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 1 ರಂದು ನಡೆಯಿತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಕೆ.ಪಿ.ಸಿ.ಸಿ ಮುಖ್ಯ ವಕ್ತಾರ, ಸಾಮಾಜಿಕ, ಧಾರ್ಮಿಕ, ರಾಜಕೀಯ,ಸಹಕಾರಿ,ಕ್ರೀಡಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಟಿ.ಎಂ ಶಹೀದ್ ತೆಕ್ಕಿಲ್ ಅವರಿಗೆ ದುಬೈ ಮಲಬಾರ ಸಾಂಸ್ಕೃತಿಕ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿಯನ್ನು ಉದ್ಯಮಿ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಮಾಹಿನ್ ಹಾಜಿ ಕಲ್ಲಟ್ರ ನೀಡಿದರು, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಮ ಶಾಲು ಮತ್ತು ಸ್ಮರಣಿಕೆ
ನೀಡಿ ಸನ್ಮಾನಿಸದರು, ಕೇರಳದ ಖ್ಯಾತ ಕವಿ ಕೃಷ್ಣಕುಮಾರ್ ಪಳ್ಳಿಯತ್, ಗಾಯಕಿ ಸುಲೇಖ ಭಶೀರ್, ಗಾಯಕ ಕಲಾಭವನ್ ರಾಜು, ಕನ್ನಡ ಎಂ ಎ ಪದವಿಯಲ್ಲಿ ಕೇರಳ ರಾಜ್ಯದಲ್ಲಿ ಗರಿಷ್ಟ ಅಂಕ ಪಡೆದ ರಕ್ಷಾ ಎನ್ ಇವರುಗಳನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರಶಸ್ತಿ ಮತ್ತು ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಕಾಸರಗೋಡು ಸಪ್ತ ಭಾಷೆಗಳ ಸಂಗಮ ಭೂಮಿ, ಇಲ್ಲಿಯ ಜನರ ಆಚಾರ ವಿಚಾರ, ಭಾಷೆ,ಧಾರ್ಮಿಕ,ಸಾಂಸ್ಕೃತಿಕ ಚಟುವಟಿಕೆಗಳು ಒಂದೇ ರೀತಿಯಿದ್ದು ಈ ಪ್ರಶಸ್ತಿ ಮತ್ತು ಸನ್ಮಾನ ನನ್ನ ಸಮಾಜ ಸೇವೆ ಮತ್ತಿತರ ಕೆಲಸವನ್ನು ಇನ್ನಷ್ಟು ಹೆಚ್ಚು ಜವಾಬ್ದಾರಿಯಿಂದ ಮಾಡಲು ಪ್ರೋತ್ಸಾಹಿಸಿದಂತೆ ಎಂದು ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಶ್ರಪ್ ಕಾರ್ಲೆ ಸ್ವಾಗತಿಸಿದರು ಹನೀಫ್ ವಂದಿಸಿದರು ಸಮಾರಂಭದಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಡಿ ವೈ ಎಸ್ ಪಿ ಸುಕುಮಾರನ್, ಗಂಗಾಧರನ್, ಶ್ರೀಮತಿ ವೀಣಾ ಸಹಿತ ಸರಕಾರಿ ಅಧಿಕಾರಿಗಳು ಉದ್ಯೋಗಿಗಳು ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಿ ಓಣಂ ಹಬ್ಬ ಆಚರಿಸಿದರು 300 ಜನರಿಗೆ ವಿಶೇಷವಾಗಿ ವಿವಿಧ ಬಗೆಯಿಂದ ತಯಾರಿಸಿದ ಭೋಜನ ವ್ಯವಸ್ಥೆ ಏರ್ಪಡಿಸಲಾಯಿತು.

Leave a Response

error: Content is protected !!