




ಪುತ್ತೂರು: ಸಂವಿಧಾನ ದಿನದ ಅಂಗವಾಗಿ ವಕೀಲರ ಸಂಘ ಪುತ್ತೂರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಜಂಟಿ ಆಶ್ರಯದಲ್ಲಿ ‘ವಕೀಲರ ವೃತ್ತಿ ಶ್ರೇಷ್ಠ ಅನುಭೂತಿ’ ಹೆಸರಿನ ಕಾನೂನು ಕಾರ್ಯಾಗಾರ ಪುತ್ತೂರು ವಕೀಲರ ಸಂಘದ ಪರಾಶಯ ಸಭಾಂಗಣದ ನ.25 ರಂದು ನಡೆಯಿತು.
ಕಾರ್ಯಾಗಾರವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ. ಎಸ್.ದೀಕ್ಷಿತ್ ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದರು. ರಾಜರ ಕಾಲದಿಂದಲೂ ವಕೀಲ ಜನಸಾಮಾನ್ಯ ಮತ್ತು ರಾಜರ ನಡುವಿನ ಒಂದು ಕೊಂಡಿಯಂತೆ ಕೆಲಸ ಮಾಡಿದವರು. ಇದೇ ಪ್ರವೃತ್ತಿ ಇದೀಗ ಸಾಮಾಜಿಕ ವ್ಯವಸ್ಥೆಯಲ್ಲೂ ಮುಂದುವರಿದಿದೆ ಎಂದ ಅವರು ಯಾವ ರೀತಿ ರೈತನಿಲ್ಲದೆ ಅನ್ನ ಬೆಳೆಯುವುದಿಲ್ಲವೋ, ಯಾವ ರೀತಿ ಸೈನಿಕನಿಲ್ಲದೆ ದೇಶಕ್ಕೆ ರಕ್ಷಣೆಯಿಲ್ಲವೋ ಅದೇ ರೀತಿ ವಕೀಲ ಇಲ್ಲದೇ ಹೋದಲ್ಲಿ ನ್ಯಾಯಾಂಗ ವ್ಯವಸ್ಥೆ ನಡೆಯಲು ಸಾಧ್ಯವಿಲ್ಲ ಎಂದರು. ವಕೀಲರಿಲ್ಲದ ನ್ಯಾಯಾಂಗ ವ್ಯವಸ್ಥೆಯನ್ನೂ ಊಹಿಸುವುದೂ ಅಸಾಧ್ಯ ಎಂದರು.
add a comment