ರಾಜ್ಯ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಭಗವತಿ ದೊಡ್ಡ ಮುಡಿ: ಕಣ್ತುಂಬಿಕೊಂಡ ಸಾವಿರಾರು ಭಕ್ತರು .

ಸುಳ್ಯ ಮತ್ತು ಮಡಿಕೇರಿ ಗಡಿಭಾಗದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯುವ ವಿಶಿಷ್ಟ ಶ್ರೀ ಭಗವತಿ ದೊಡ್ಡ ಮುಡಿ, ಮುಗಿಲೆತ್ತರದ ಈ ಮುಡಿಗೆ ವಿಶೇಷ ಆಕರ್ಷಣೆ, ಪ್ರತೀ ವರ್ಷದಂತೆ ಇಂದುಎ.1 ರಂದು ಭಗವತಿ ದೊಡ್ಡಮುಡಿ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ವಠಾರದಲ್ಲಿ ನಡೆಯಿತು , ಸಾವಿರಾರು ಭಕ್ತರು ಈ ದೈವಿಕ ಕಾರ್ಯದಲ್ಲಿ ಪಾಲ್ಗೊಂಡರು ತುಳುನಾಡಿನ ಭೂತಾರಾಧನೆ ಮತ್ತು ಕೇರಳದ ತೆಯ್ಯಂನ ಮಿಳಿತದೊಂದಿಗೆ ನಡೆಯುವ ಪೆರಾಜೆ ದೊಡ್ಡಮುಡಿ ಪ್ರತಿ ವರ್ಷದಂತೆ ಪೆರಾಜೆ ಗ್ರಾಮದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯಿತು.

ಪುರಾಣದ ಹಿನ್ನಲೆಯಲ್ಲಿ ಪಾರ್ವತಿ ದೇವಿಯ ತಂದೆ ದಕ್ಷ ಯಜ್ಞ ಮಾಡುತ್ತಿರುವ ವೇಳೆ ಅಳಿಯನಾದ ಈಶ್ವರ ದೇವರಿಗೆ ಹೇಳಿರಲಿಲ್ಲ. ಈ ಯಜ್ಞದ ವಿಷಯ ತಿಳಿದ ಪಾರ್ವತಿ ತಂದೆ ನಡೆಸುವ ಯಜ್ಞದಲ್ಲಿ ಭಾಗವಹಿಸಿತ್ತೇನೆ ಎಂದು ತನ್ನ ಪತಿ ಈಶ್ವರನಲ್ಲಿ ಪಾರ್ಥಿಸುತ್ತಾಳೆ. ಆದರೆ ಅಮಂತ್ರಣ ಇಲ್ಲದ ಯಜ್ಞಕ್ಕೆ ಹೋಗುವುದು ಬೇಡ ಎಂದು ಈಶ್ವರ ಹೇಳಿದರೂ, ಪಾರ್ವತಿ ಹೋಗುತ್ತಾಳೆ. ಆದರೆ ಅಲ್ಲಿ ಎಲ್ಲ ದೇವರಿಗೆ ಮಾನ್ಯತೆ ನೀಡಿದರು. ತನ್ನ ಪತಿ ಈಶ್ವರನಿಗೆ ಸಿಗಲಿಲ್ಲ. ಇದರಿಂದ ಅವಮಾನ ಗೊಂಡ ಪಾರ್ವತಿ ರೌದ್ರ ಅವತಾರವಾಗಿ ತನ್ನ ಶರೀರದಲ್ಲಿ ಬೆಂಕಿ ಉತ್ಪತ್ತಿ ಮಾಡಿ, ಯೋಗಾಗ್ನಿಯಲ್ಲಿ ಬೆಂದುಹೋದಳು. ಬಳಿಕ ರೌದ್ರರೂಪ ಒಂದು ಭಾಗವಾದ ಪಾರ್ವವತಿ ಭಗವತಿ ದೈವವಾಗಿ ಆರಾಧನೆ ಮಾಡಲಾಗುತ್ತದೆ ಎಂದು ಕಥೆ ಮೂಲಕ ಹೇಳಲಾಗುತ್ತಿದೆ.


ಪೆರಾಜೆಯಲ್ಲಿ ಭಗವತಿ ಆರಾಧನೆ ಹಿನ್ನಲೆ:ಪೆರಾಜೆಯಲ್ಲಿ ಮೂಲ ದೇವರಾಗಿ ಧರ್ಮ ಶಾಸ್ತಾರನ ಆರಾಧನೆ ಮಾಡಲಾಗುತ್ತದೆ. ಧರ್ಮ ಶಾಸ್ತಾರ ಎಂದರೆ ಈಶ್ವರ ಮತ್ತು ಪಾವತಿಯ ಪುತ್ರ, ಪುತ್ರನ
ರಕ್ಷಣೆಗಾಗಿ ಬಂದಿರುವುದು ಪಾರ್ವತಿಯ ರೂಪದ ಭಗವತಿ ದೇವಿ ಎಂದು ಹೇಳಲಾಗುತ್ತಿದ್ದು, ಆ ಮೂಲಕ ಭಗವತಿ ದೇವಿಯನ್ನು ಆರಾಧನೆ ಮಾಡಲಾಗುತ್ತಿದೆ.
ರೌದ್ರ ಅವತಾರದಲ್ಲಿ ಒಂದಾದ ಭಗವತಿ ದೇವಿಯ ಮುಡಿಯು ದೇವಿ ಗುಡಿಯ ಹತ್ತಿರದ ಹುಲಿಚಾಡಿ ಯಷ್ಟು ಉದ್ದ ಇರಬೇಕು ಎಂದು ಬಾಯಿ ಮಾತಿನಿಂದ ಹೇಳಲಾಗುತ್ತಿದೆ. ಆದರೆ ಭಗವತಿ ಮುಡಿ
ಅಳತೆ ಇಲ್ಲ. ಅದು ಅಡಿ-ಮುಡಿಯ ವರೆಗೆ ಎಂಬ ಗಾದೆಯಂತೆ ಭೂಮಿಯಿಂದ ಆಕಾಶದ ವರೆಗೂ ಇರಬಹುದು ಅದಕ್ಕೆ ಲೆಕ್ಕಚಾರ ಇಲ್ಲ
ಧಾರ್ಮಿಕ ನಂಬಿಕೆಯೊಂದಿಗೆ ಭಗವತಿ ದೊಡ್ಡಮುಡಿ ನಡೆಯುತ್ತದೆ. ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಿಕೆ ಹೊತ್ತ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸಲಾಗುತ್ತಿದೆ. ಭಗವತಿ ದೈವದ ಮುಡಿಯನ್ನು ಬಣ್ಣರ ಜಾತಿಯವರು ಕಟ್ಟುತ್ತಿದ್ದಾರೆ. ಅಡೂರು ಬೆಡಿ, ತೊಡಿಕಾನ ಕೊಡಿ, ಪೆರಾಜೆ ಮುಡಿ ಎನ್ನುವ ನಾನ್ಣುಡಿಯಂತೆ ಎ.1ರಂದು ಪೆರಾಜೆ ಭಗವತಿಮುಡಿ ಪ್ರತಿವರ್ಷದಂತೆ, ಈ ವರ್ಷವೂ ಅದೇ ರೀತಿ ನಡೆಯಿತು.


ರಾಜ್ಯದಲ್ಲೇ ಅಪರೂಪದ ದೇವಿಯ ಆರಾಧನೆಯ ಮೂಲಕ ಪೂಜಿಸುವ ಪೆರಾಜೆ ಭಗವತಿ ದೊಡ್ಡಮುಡಿಯಲ್ಲಿ ಕೇರಳ ಮತ್ತು ಕರ್ನಾಟಕದ ನಾನಾ ಭಾಗಗಳಿಂದ ಬಂದ ಸಾವಿರಾರು ಭಕ್ತರು ನೋಡಿ
ಭಕ್ತಿಯಿಂದ ಭಾವಪರಾವಶರಾದರು.

Leave a Response

error: Content is protected !!