ರಾಜ್ಯ

ಕಡಬ:ಮತಗಟ್ಟೆಯ ಬಳಿ ಹಾಕಿದ್ದ ಅಭ್ಯರ್ಥಿಗಳ ಬ್ಯಾನರ್ ತೆರವಿಗೆ ಮುಂದಾದ ಕೆ.ಆರ್ ಪಕ್ಷ:ಪೋಲೀಸರ ಮದ್ಯಸ್ತಿಕೆಯಲ್ಲಿ ತೆರವು.

ಕಡಬದಲ್ಲಿ ಮತದಾನ ಕೇಂದ್ರದ ಹೊರ ಭಾಗದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಕಿದ್ದ ಬ್ಯಾನರನ್ನು ಕೆ.ಆರ್ ಪಕ್ಷದ ಕಾರ್ಯಕರ್ತರು ತೆರವಿಗೆ ಮುಂದಾಗಿರುವ ಘಟನೆ ಕಡದಲ್ಲಿ ವರದಿಯಾಗಿದೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಮತಗಟ್ಟೆಯ ಸಮೀಪ ರಸ್ತೆ ಬದಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೂತ್ ಹಾಕಿ ತಮ್ಮ ಪಕ್ಷದ ಅಭ್ಯರ್ಥಿಗಳ ಬ್ಯಾನರ್ ಅಳವಡಿಸಿದ್ದರು. ಇದನ್ನು ಗಮನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಹಾಗೂ ನೀತಿ ಸಂಘಟನೆಯ ಪ್ರಮುಖರು ತೆರವುಗೊಳಿಸುವಂತೆ ಸೂಚಿಸಿದರು.

ಇದರಿಂದ ಕೆಲ ಹೊತ್ತು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿಚಲಿತಗೊಂಡರು. ಈ ನಡುವೆ ಪೊಲೀಸರು ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದು ಎಲ್ಲಾ ಪಕ್ಷಗಳು ತಾವು ಹಾಕಿದ್ದ ಬ್ಯಾನರ್ ಗಳನ್ನು ಈಗಾಗಲೇ ತೆರವುಮಾಡಿದ್ದಾರೆ.

Leave a Response

error: Content is protected !!