

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವ್ಯಾಪಕ
ಹತ್ಯಾಕಾಂಡಗಳು ನಡೆಯುತ್ತಿದ್ದು, ಬೆಲೆ ಏರಿಕೆಯೂ ಮಿತಿ ಮೀರಿದೆ. ಕೃಷಿಕರಿಗೆ ಬೆಳೆವಿಮೆ ನೀಡುವ ವ್ಯವಸ್ಥೆಗೆ ಇನ್ನೂ ಮುಂದಾಗಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಇಂದು ಸುಳ್ಯ ತಾಲೂಕು ಕಚೇರಿ ಎದುರುಗಡೆ ಬಿಜೆಪಿ ಪ್ರತಿಭಟನಾ ಧರಣಿ ನಡೆಸಿತು. ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿ, ಹಿರಿಯರಾದ ಡಾ. ರಾಮಯ್ಯ ಭಟ್, ಮಾಜಿ ಜಿ.ಪಂ. ಸದಸ್ಯ ಎಸ್.ಎನ್.ಮನ್ಮಥ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿಗಳಾದ ಸುಬೋಧ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಮಾತನಾಡಿದರು.
ಧರಣಿಯ ಬಳಿಕ ರಾಜ್ಯಪಾಲರಿಗೆ ಸಲ್ಲಿಸಲಾದ
ಮನವಿಯನ್ನು ತಹಶೀಲ್ದಾರ್‌ರಿಗೆ ನೀಡಲಾಯಿತು.

add a comment