

ಕರ್ನಾಟಕದ ವಿಧಾನಸಭೆಗೆ ಮೇ.10 ರಂದು ಚುನಾವಣೆ ನಡೆಯಲಿದ್ದು ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದುವರೆಗೆ ಒಟ್ಟು 9 ಅಭ್ಯರ್ಥಿಗಳು 11 ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪ ಎರಡು ನಾಮ ಪತ್ರ ಸಲ್ಲಿಸಿದ್ದಾರೆ.
ಈ ಬಾರಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪಕ್ಷೇತರರು
ಕಣದಲ್ಲಿದ್ದಾರೆ. ನಾಮಪತ್ರಗಳ ಪರಿಶೀಲನೆ ಏ.21 ರಂದು ನಡೆಯಲಿದ್ದು ಏ. 24 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ.
ಇದೀಗ ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ ಜಿ.ಕೃಷ್ಣಪ್ಪ, ಜೆಡಿಎಸ್ ನಿಂದ ಹೆಚ್ ಎಲ್.ವೆಂಕಟೇಶ್, ಆಮ್ ಆದ್ಮಿ ಪಾರ್ಟಿಯಿಂದ ಸುಮನಾ ಬೆಳ್ಳಾರ್ಕರ್, ಪ್ರಜಾಕೀಯ ಪಕ್ಷದಿಂದ ರಮೇಶ್ ಬೂಡು,ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರ, ಕರ್ನಾಟಕ ರಾಷ್ಟ್ರೀಯ ಶಕ್ತಿ ಪಕ್ಷದಿಂದ ಗಣೇಶ್ ಎಂ.,ಪಕ್ಷೇತರರಾಗಿ ಸತೀಶ್ ಬೂಡುಮಕ್ಕಿ, ಗುರುವಪ್ಪ ಕಲ್ಲುಗದ್ದೆ ಕಣದಲ್ಲಿದ್ದಾರೆ.ನಾಮಪತ್ರಗಳ ಪರಿಶೀಲನೆ ಏ.21ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.24 ಕೊನೆಯ ದಿನವಾಗಿದೆ