ಅಂತರಾಷ್ಟ್ರೀಯ

ಗಿಲ್-ಇಶಾನ್ ಸ್ಫೋಟಕ ಬ್ಯಾಟಿಂಗ್: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 170 ರನ್‌ಗಳ ಭರ್ಜರಿ ಜಯ
ಅಂತರಾಷ್ಟ್ರೀಯ ಕ್ರೀಡೆ

ಗಿಲ್-ಇಶಾನ್ ಸ್ಫೋಟಕ ಬ್ಯಾಟಿಂಗ್: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 170 ರನ್‌ಗಳ ಭರ್ಜರಿ ಜಯ

ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ 170 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಭಾರತ ತಂಡದ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ನೀಡಿದ ಅತ್ಯುತ್ತಮ ಪ್ರದರ್ಶನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು.…

ರಾಜ್ಯ

ಧಾರ್ಮಿಕ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಬರಿಮಲೆ ಯಾತ್ರೆ; ಕೊಚ್ಚಿಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ ಹೆಚ್‌ಡಿಕೆ

ಕೊಚ್ಚಿ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ತಮ್ಮ ಪವಿತ್ರ ಯಾತ್ರೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಇಂದು (ಜೂನ್ 15) ಬೆಳಿಗ್ಗೆ ಕೇರಳದ ಕೊಚ್ಚಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕುಮಾರಸ್ವಾಮಿ ಅವರು ಶಾಸ್ತ್ರೋಕ್ತವಾಗಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದರು. ​ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ಮೊದಲ ಪ್ರಮುಖ ಧಾರ್ಮಿಕ ಯಾತ್ರೆ ಇದಾಗಿದ್ದು, ತಮ್ಮ ಆಪ್ತರು ಹಾಗೂ ಪಕ್ಷದ ಪ್ರಮುಖ…

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಬರಿಮಲೆ ಯಾತ್ರೆ; ಕೊಚ್ಚಿಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ ಹೆಚ್‌ಡಿಕೆ
ಧಾರ್ಮಿಕ ರಾಜಕೀಯ ರಾಜ್ಯ
​ಶನಿ ಜಯಂತಿ 2026: ಇಂದು ವೈಶಾಖ ಅಮಾವಾಸ್ಯೆ; ಶನಿ ಮಹಾತ್ಮನ ಕೃಪೆಗೆ ಪಾತ್ರರಾಗಲು ಸೂಕ್ತ ಕಾಲ!
ಆಧ್ಯಾತ್ಮ ಧಾರ್ಮಿಕ ರಾಷ್ಟ್ರೀಯ

​ಶನಿ ಜಯಂತಿ 2026: ಇಂದು ವೈಶಾಖ ಅಮಾವಾಸ್ಯೆ; ಶನಿ ಮಹಾತ್ಮನ ಕೃಪೆಗೆ ಪಾತ್ರರಾಗಲು ಸೂಕ್ತ ಕಾಲ!

ಇಂದು ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ‘ಶನಿ ಜಯಂತಿ’ಯನ್ನು ಆಚರಿಸಲಾಗುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ, ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಸೂರ್ಯದೇವ ಮತ್ತು ಛಾಯಾದೇವಿಯ ಪುತ್ರನಾದ ಶನಿ ಮಹಾತ್ಮನು ಜನಿಸಿದನು ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ಕರ್ಮಫಲ ದಾತ ಮತ್ತು ನ್ಯಾಯದೇವತೆ ಎಂದು ಕರೆಯಲಾಗುತ್ತದೆ. ಮನುಷ್ಯರು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ತಕ್ಕಂತೆ ಫಲ ನೀಡುವ ಈ ದಿನ, ಶನಿ ದೇವನ ವಿಶೇಷ ಅನುಗ್ರಹ ಪಡೆಯಲು…

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಹೊರವಲಯದಲ್ಲಿ ಶೀಘ್ರದಲ್ಲೇ ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿ ಮಾದರಿಯ ವೆಂಕಟೇಶ್ವರ ಸ್ವಾಮಿ ದೇಗುಲ ತಲೆಯೆತ್ತಲಿದೆ. ನಗರದ ಸಮೀಪವಿರುವ ಕೋಳಿಕೊಪ್ಪ ಗ್ರಾಮದ ಗುಡ್ಡದ ಮೇಲೆ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಾಣವಾಗಲಿದೆ. 7 ಎಕರೆ ಜಮೀನು ಹಸ್ತಾಂತರ​ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ಮೀಸಲಿಡಲಾಗಿದ್ದ 7 ಎಕರೆ ಜಮೀನನ್ನು ಅಧಿಕೃತವಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭೂಮಿಯ…

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ
ಧಾರ್ಮಿಕ ರಾಜ್ಯ
ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ
ಧಾರ್ಮಿಕ ಪ್ರಾದೇಶಿಕ

ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ

ಕಲ್ಲುಗುಂಡಿ: ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ಸಂಯುಕ್ತಾಶ್ರಯದಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್(ಮುಂಜಿ) ಕಾರ್ಯಕ್ರಮ ಏಪ್ರಿಲ್ 12ರಂದು ಕಲ್ಲುಗುಂಡಿಯ ಸುನ್ನೀ ಸೆಂಟರ್‌ನಲ್ಲಿ ಯಶಸ್ವಿಯಾಗಿ ನೆರವೇರಿತು. ಡಾ. ಮುಹಮ್ಮದ್ ಫಯಾಝ್ ಮಂಜನಾಡಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಾಮಾಜಿಕ ಸೇವೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಯಿತು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅವರು ಮಾತನಾಡಿ ಇಂತಹ ಸೇವಾ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. ಬದ್ರಿಯಾ…

ಕ್ರೀಡೆ

ಸುಬ್ರಹ್ಮಣ್ಯ: ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ವಿವೇಕಾನಂದ ಮೃತ್ಯು
ರಾಜ್ಯ

ಸುಬ್ರಹ್ಮಣ್ಯ: ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ವಿವೇಕಾನಂದ ಮೃತ್ಯು

ಕಡಬ ತಾಲುಕು ಸುಬ್ರಹ್ಮಣ್ಯ ದ ಇಂಜಾಡಿ ಬಳಿ ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ವರಿಯಾಗಿದೆ.ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ ಎಂಬವರು ಮಾ.3 ರಾತ್ರಿ ಗಂಟೆ 9 ರ ಆಸುಪಾಸು ಇಂಜಾಡಿ ಬಳಿ ಅಟೋದಲ್ಲಿ ಹೋಗುತ್ತಿರುವಾಗ ಲೋ…

ಬಂಟ್ವಾಳ ಕಾರು ಅಪಘಾತ :ಕಾರು ಚಾಲಾಯಿಸುತ್ತಿದ್ದ ತಂದೆಯ ಮೇಲೆಯೇ ಮಗನಿಂದ ಪೋಲಿಸ್  ದೂರು.
ರಾಜ್ಯ

ಬಂಟ್ವಾಳ ಕಾರು ಅಪಘಾತ :ಕಾರು ಚಾಲಾಯಿಸುತ್ತಿದ್ದ ತಂದೆಯ ಮೇಲೆಯೇ ಮಗನಿಂದ ಪೋಲಿಸ್  ದೂರು.

. ಬಂಟ್ವಾಳ: ಕಾರು ಅಪಘಾತ ಸಂಭವಿಸಿದ ಪ್ರಕರಣವೊಂದರಲ್ಲಿ ಕಾರು ಚಾಲಕ ತಂದೆಯ ಮೇಲೆ ಮಗನೇ ದೂರು ನೀಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಂದಾರು ನರಮಜೆ ನಿವಾಸಿ ಹನೀಫ್ ಎಂಬವರು ಆತನ ತಂದೆಯಾದ ಹಮೀದ್ ಎಂಬವರ ಮೇಲೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ…

ಎಸ್.ಎನ್ ಮನ್ಮಥ ದ.ಕ.ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ  ಅವಿರೋಧ ಆಯ್ಕೆ.
ರಾಜ್ಯ

ಎಸ್.ಎನ್ ಮನ್ಮಥ ದ.ಕ.ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆ.

ಸುಳ್ಯ ಐವರ್ನಾಡು ಸೊಸೈಟಿಯ ಅಧ್ಯಕ್ಷ ಎಸ್.ಎನ್.ಮನ್ಮಥ ಅವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದಿನ ವರೆಗೆ ಸುಳ್ಯದಿಂದ ಮನ್ಮಥರ ನಾಮಪತ್ರ ಮಾತ್ರ ಸಲ್ಲಿಸಲ್ಪಟ್ಟಿರುವುದರಿಂದ ಅವರು ಅವಿರೋಧವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.

ಸುಳ್ಯ : ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಸೀತಾ ಫಾಲ್ಸ್ ಚಾರಣ ಮತ್ತು ಅಧ್ಯಯನ ಭೇಟಿ
ರಾಜ್ಯ

ಸುಳ್ಯ : ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಸೀತಾ ಫಾಲ್ಸ್ ಚಾರಣ ಮತ್ತು ಅಧ್ಯಯನ ಭೇಟಿ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ಹಾಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ವತಿಯಿಂದ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ 2ನೇ ಮಾರ್ಚ್ 2024, ಶನಿವಾರದಂದು ಹೆಬ್ರಿಯ ಕೂಡ್ಲು ತೀರ್ಥ (ಸೀತಾ ಫಾಲ್ಸ್) ಜಲಪಾತಕ್ಕೆ ಚಾರಣ ಮತ್ತು ಕಾರ್ಕಳ ತಾಲೂಕಿನ ವರಂಗ ಕೆರೆ ಬಸದಿ, ಬೈಂದೂರಿನ ಮರವಂತೆ…

ಅರಂತೋಡು ಮದರಸ ವತಿಯಿಂದ ಮುಸಾಬಕ ಸಾಹಿತ್ಯ ಸ್ಪರ್ದೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ
ರಾಜ್ಯ

ಅರಂತೋಡು ಮದರಸ ವತಿಯಿಂದ ಮುಸಾಬಕ ಸಾಹಿತ್ಯ ಸ್ಪರ್ದೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಇತ್ತೀಚೆಗೆ ಪುತ್ತೂರಿನ ಪರ್ಲಡ್ಕದಲ್ಲಿ ನಡೆದ ರಾಜ್ಯಮಟ್ಟದ ಮುಸಾಬಕ ಕಲಾ ಸಾಹಿತ್ಯೋತ್ಸವದಲ್ಲಿ ಜೂನಿಯರ್ ಆರೇಬಿಕ್ ಬರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸದ ವಿದ್ಯಾರ್ಥಿ ಮಹಮ್ಮದ್ ಹಫೀಝ್ ಹಾಗೂ ಜಿಲ್ಲಾ ಮಟ್ಟದ ಕಲಾ ಸಾಹಿತ್ಯ ಸ್ಪರ್ಧೆ ಡ್ರಾಯಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದ ಮಹಮ್ಮದ್…

ಉಪ್ಪಿನಂಗಡಿ : ಬಸ್ ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್  ದ್ವಿಚಕ್ರ ವಾಹನ ಮತ್ತು ಅಂಗಡಿಗಳಿಗೆ ಹಾನಿ
ರಾಜ್ಯ

ಉಪ್ಪಿನಂಗಡಿ : ಬಸ್ ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್ ದ್ವಿಚಕ್ರ ವಾಹನ ಮತ್ತು ಅಂಗಡಿಗಳಿಗೆ ಹಾನಿ

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಖಾಸಗಿ ಬಸ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿರುವ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.ಚಾಲಕ ಅಜಾಗರೂಕತೆಯಿಂದ ಬಸ್ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಬಸ್ ವಾಹನಗಳ ಪಾರ್ಕಿಂಗ್ ಪ್ರದೇಶ ದಾಟಿ ಅಂಗಡಿಗೆ ನುಗ್ಗಿದ್ದರಿಂದ ನಾಗರಾಜ್ ಭಟ್ ಎಂಬವರ ಸಿಹಿತಿಂಡಿ ಮತ್ತು ತಂಪು…

2024 ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ
ರಾಷ್ಟ್ರೀಯ

2024 ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಈ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ.ಉತ್ತರ ಪ್ರದೇಶ, ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ,ಅಸ್ಸಾಂ,ಛತ್ತೀಸ್ ಗಢ,ದೆಹಲಿ, ಗೋವಾ, ಗುಜರಾತ್,ಜಮ್ಮು ಮತ್ತು ಕಾಶ್ಮೀರ, ಕೇರಳ,…

ಸುಳ್ಯ ಅಕ್ರಮ ಮರಳು ಗಣಿಗಾರಿಕೆಗೆ ಸಿಂಹ ಸ್ವಪ್ನವಾಗುತ್ತಿರುವ ಸುಳ್ಯ ಪೊಲೀಸರು; ಅರಂತೋಡು  ಪಯಸ್ವಿನಿ ನದಿಯಿಂದ  ಅಕ್ರಮ ಮರಳು ಸಾಗಾಟ, ಟಿಪ್ಪರ್ ಲಾರಿಯೊಂದಿಗೆ ಚಾಲಕನ ಬಂಧನ
ರಾಜ್ಯ

ಸುಳ್ಯ ಅಕ್ರಮ ಮರಳು ಗಣಿಗಾರಿಕೆಗೆ ಸಿಂಹ ಸ್ವಪ್ನವಾಗುತ್ತಿರುವ ಸುಳ್ಯ ಪೊಲೀಸರು; ಅರಂತೋಡು ಪಯಸ್ವಿನಿ ನದಿಯಿಂದ ಅಕ್ರಮ ಮರಳು ಸಾಗಾಟ, ಟಿಪ್ಪರ್ ಲಾರಿಯೊಂದಿಗೆ ಚಾಲಕನ ಬಂಧನ

ಸುಳ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ಸುಳ್ಯ ಪೊಲೀಸರ ದಾಳಿ ನಡೆಯುತ್ತಿದ್ದು ಮರಳು ದಂಧೆ ನಡೆಸುವವರಿಗೆ ಪೊಲೀಸರು ಸಿಂಹ ಸ್ವಪ್ನವಾಗಿದ್ದಾರೆ. ಮಾ.2ರಂದು ಅರಂತೋಡು ಪಯಶ್ವಿನಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು…

ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿ; ಸವಾರ ಗಾಯ..!
ರಾಜ್ಯ

ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿ; ಸವಾರ ಗಾಯ..!

ಬಂಟ್ವಾಳ : ಬಿಸಿರೋಡಿನ ನಲ್ಕೆಮಾರ್ ಎಂಬಲ್ಲಿ ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರನಿಗೆ ಗಾಯವಾಗಿದ್ದು, ಸವಾರ ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಬೆಂಜನಪದವು ನಿವಾಸಿ ಪುರುಷೋತ್ತಮ ಆಚಾರ್ಯ ಎಂಬವರಿಗೆ ಕಾರು ಅಪಘಾತ ವಾಗಿ ಗಾಯವಾಗಿದ್ದು, ಅಮ್ಟಾಡಿ ಗ್ರಾಮದ ನಲ್ಕೆಮಾರ್ ದ್ವಾರದ ಬಳಿ ಅಪಘಾತ ಸಂಭವಿಸಿದೆ.…

ಸುಳ್ಯ : ಎನ್ನೆಂಸಿಯ ಕನ್ನಡ ಭಾಷಾ  ವಿದ್ಯಾರ್ಥಿಗಳಿಂದ ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿ
ರಾಜ್ಯ

ಸುಳ್ಯ : ಎನ್ನೆಂಸಿಯ ಕನ್ನಡ ಭಾಷಾ ವಿದ್ಯಾರ್ಥಿಗಳಿಂದ ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿಗೆ ತೆರಳಿದ್ದರು. ದ್ವಿತೀಯ ಬಿ ಎ ಮತ್ತು ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಕೋಟ ಶಿವರಾಮ ಕಾರಂತರ "ಕಂಬಳ"ದ ಕುರಿತಾದ ಪಠ್ಯವನ್ನು ಅಧ್ಯಯನ ಮಾಡಲು ಇರುವುದರಿಂದ ಅದನ್ನು ಪ್ರಾಯೋಗಿಕವಾಗಿ ವೀಕ್ಷಿಸುವ ಸಲುವಾಗಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI