ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಹೊರವಲಯದಲ್ಲಿ ಶೀಘ್ರದಲ್ಲೇ ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿ ಮಾದರಿಯ ವೆಂಕಟೇಶ್ವರ ಸ್ವಾಮಿ ದೇಗುಲ ತಲೆಯೆತ್ತಲಿದೆ. ನಗರದ ಸಮೀಪವಿರುವ ಕೋಳಿಕೊಪ್ಪ ಗ್ರಾಮದ ಗುಡ್ಡದ ಮೇಲೆ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಾಣವಾಗಲಿದೆ.

7 ಎಕರೆ ಜಮೀನು ಹಸ್ತಾಂತರ
​ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ಮೀಸಲಿಡಲಾಗಿದ್ದ 7 ಎಕರೆ ಜಮೀನನ್ನು ಅಧಿಕೃತವಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭೂಮಿಯ ದಾಖಲೆ ಪತ್ರಗಳನ್ನು ಟಿಟಿಡಿ ಮಂಡಳಿಯ ಸದಸ್ಯರಾದ ಎಸ್. ನರೇಶ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.

ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ಅಧ್ಯಕ್ಷರಾದ ಲಕ್ಷ್ಮಣ ರೆಡ್ಡಿ ಮತ್ತು ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ ಅವರು ಜಂಟಿಯಾಗಿ ಈ ದಾಖಲೆಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಮತ್ತು ಧಾರ್ಮಿಕ ಕೇಂದ್ರ
​ಬೆಳಗಾವಿಯ ಕೋಳಿಕೊಪ್ಪ ಗ್ರಾಮದ ಗುಡ್ಡದ ಮೇಲಿರುವ ಈ ಸ್ಥಳವು ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು, ದೇವಸ್ಥಾನ ನಿರ್ಮಾಣದ ನಂತರ ಇದು ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿ ಮಾರ್ಪಡುವ ನಿರೀಕ್ಷೆಯಿದೆ. ತಿರುಪತಿಗೆ ಹೋಗಲಾಗದ ಭಕ್ತರಿಗೆ ಈ ಭಾಗದಲ್ಲೇ ಶ್ರೀನಿವಾಸನ ದರ್ಶನ ಪಡೆಯಲು ಅನುಕೂಲವಾಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಧಾರ್ಮಿಕ ರಾಜ್ಯ