ಇಂದು SSLC ಫಲಿತಾಂಶ: ಗ್ರೇಡ್ ಬದಲು ಅಂಕಗಳೇ ಫಿಕ್ಸ್!

ಇಂದು SSLC ಫಲಿತಾಂಶ: ಗ್ರೇಡ್ ಬದಲು ಅಂಕಗಳೇ ಫಿಕ್ಸ್!

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ತೆರೆ ಬಿದ್ದಿದೆ. 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಇಂದು (ಏಪ್ರಿಲ್ 23, ಗುರುವಾರ) ಮಧ್ಯಾಹ್ನ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಿಸಿದ್ದಾರೆ.

ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಫಲಿತಾಂಶ ಪ್ರಕಟಣೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

ಫಲಿತಾಂಶ ಎಲ್ಲಿ ಮತ್ತು ಹೇಗೆ ನೋಡುವುದು?​ವಿದ್ಯಾರ್ಥಿಗಳು ನಾಳೆ ಮಧ್ಯಾಹ್ನ 12:00 ಗಂಟೆಯ ನಂತರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ: karresults.nic.in ​kseab.karnataka.gov.in

3ನೇ ಭಾಷೆ ಪರೀಕ್ಷೆ: ಗ್ರೇಡ್ ಬದಲು ಅಂಕಗಳೇ ಫಿಕ್ಸ್!​ಈ ವರ್ಷದ ಫಲಿತಾಂಶದಲ್ಲಿ ಒಂದು ಪ್ರಮುಖ ಬದಲಾವಣೆಯಿದೆ. ರಾಜ್ಯ ಸರ್ಕಾರವು ಈ ಹಿಂದೆ ತೃತೀಯ ಭಾಷಾ ವಿಷಯಗಳಿಗೆ ‘ಗ್ರೇಡ್’ ನೀಡಲು ನಿರ್ಧರಿಸಿತ್ತು. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಹಿಂಪಡೆಯಲಾಗಿದೆ. “ನ್ಯಾಯಾಲಯದ ಆದೇಶದಂತೆ ಈ ವರ್ಷ ಮೂರನೇ ಭಾಷೆಯ ಪೇಪರ್‌ಗಳಿಗೆ ಗ್ರೇಡ್ ಬದಲಾಗಿ ಮೊದಲಿನಂತೆಯೇ ಅಂಕಗಳನ್ನು ನೀಡಲಾಗುವುದು,” ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

​”ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಎಲ್ಲವನ್ನೂ ಪರಿಗಣಿಸಿದ್ದೇವೆ. ಮುಖ್ಯಮಂತ್ರಿಗಳು ಕೂಡ ಫಲಿತಾಂಶದ ಕುರಿತು ಹರ್ಷ ವ್ಯಕ್ತಪಡಿಸಿದ್ದು, ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ,” ಎಂದು ಸಚಿವರು ತಿಳಿಸಿದರು.

ರಾಜ್ಯ ಶೈಕ್ಷಣಿಕ