ಎನ್ನೆಂಸಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ವತಿಯಿಂದ ವಿಶ್ವ ಜಲ ದಿನಾಚರಣೆ ‘ನೀರರಿವು’ ಕಾರ್ಯಕ್ರಮ
ಜೀವಜಲದ ಕುರಿತು ಮುಖ ವರ್ಣಚಿತ್ರ ರಚನೆ ಮತ್ತು ಕಿರು ನಾಟಕ ಸ್ಪರ್ಧೆ
ಸುಳ್ಯ, ಮಾ.22; ನೆಹರೂ ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ಘಟಕಗಳ ವತಿಯಿಂದ ವಿಶ್ವ ಜಲ ದಿನ ಪ್ರಯುಕ್ತ ‘ನೀರರಿವು’ ಎಂಬ ಮಹತ್ವದ ಕಾರ್ಯಕ್ರಮ ಮಾರ್ಚ್ 22 ಶುಕ್ರವಾರದಂದು ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ ಬಾಲಚಂದ್ರ ಗೌಡರು ನೇಚರ್ ಕ್ಲಬ್ ಕಾರ್ಯದರ್ಶಿ ಕು. ಪವಿತ್ರಾಕ್ಷಿ ಸಾಂಪ್ರದಾಯಿಕವಾಗಿ ನೀರು ನೀಡಿ ಅತಿಥಿಗಳನ್ನು ಸ್ವಾಗತಿಸುವ ರೀತಿಯಲ್ಲಿ ನೀಡಿದ ನೀರನ್ನು ಸ್ವೀಕರಿಸುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿ, ನಮ್ಮ ದೈನಂದಿನ ಬದುಕಿನಲ್ಲಿ ನೀರಿನ ಮಹತ್ವವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ…


































