ಅಂತರಾಷ್ಟ್ರೀಯ

ಇರಾನ್ ಪ್ರತಿಕಾರ: ಬಹ್ರೇನ್, ಜೋರ್ಡಾನ್ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ತೀವ್ರ
ಅಂತರಾಷ್ಟ್ರೀಯ ಅಪರಾಧ

ಇರಾನ್ ಪ್ರತಿಕಾರ: ಬಹ್ರೇನ್, ಜೋರ್ಡಾನ್ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ತೀವ್ರ

ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಪ್ರಾಂತ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ನ ದಕ್ಷಿಣ ಭಾಗಗಳ ಮೇಲೆ ನಡೆಸಿದ ವಾಯುದಾಳಿಗಳಿಗೆ ಪ್ರತಿಯಾಗಿ ಇರಾನ್ ಭೀಕರ ಪ್ರತಿಕಾರ ತೀರಿಸಿಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ ಅತ್ಯಂತ ಪ್ರಮುಖ '5ನೇ ಫ್ಲೀಟ್' (Fifth Fleet) ಪ್ರಧಾನ ಕಚೇರಿ ಹಾಗೂ ಜೋರ್ಡಾನ್ ಮತ್ತು ಕುವೈತ್‌ನಲ್ಲಿರುವ ಯುಎಸ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್‌ಗಳ ಸುರಿಮಳೆಗೈದಿದೆ. ಈ ದಿಢೀರ್ ದಾಳಿಯಿಂದಾಗಿ ಇಡೀ ಗಲ್ಫ್ ಪ್ರಾಂತ್ಯದಲ್ಲಿ…

ರಾಜ್ಯ

ಧಾರ್ಮಿಕ

​ಶನಿ ಜಯಂತಿ 2026: ಇಂದು ವೈಶಾಖ ಅಮಾವಾಸ್ಯೆ; ಶನಿ ಮಹಾತ್ಮನ ಕೃಪೆಗೆ ಪಾತ್ರರಾಗಲು ಸೂಕ್ತ ಕಾಲ!

ಇಂದು ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ‘ಶನಿ ಜಯಂತಿ’ಯನ್ನು ಆಚರಿಸಲಾಗುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ, ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಸೂರ್ಯದೇವ ಮತ್ತು ಛಾಯಾದೇವಿಯ ಪುತ್ರನಾದ ಶನಿ ಮಹಾತ್ಮನು ಜನಿಸಿದನು ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ಕರ್ಮಫಲ ದಾತ ಮತ್ತು ನ್ಯಾಯದೇವತೆ ಎಂದು ಕರೆಯಲಾಗುತ್ತದೆ. ಮನುಷ್ಯರು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ತಕ್ಕಂತೆ ಫಲ ನೀಡುವ ಈ ದಿನ, ಶನಿ ದೇವನ ವಿಶೇಷ ಅನುಗ್ರಹ ಪಡೆಯಲು…

​ಶನಿ ಜಯಂತಿ 2026: ಇಂದು ವೈಶಾಖ ಅಮಾವಾಸ್ಯೆ; ಶನಿ ಮಹಾತ್ಮನ ಕೃಪೆಗೆ ಪಾತ್ರರಾಗಲು ಸೂಕ್ತ ಕಾಲ!
ಆಧ್ಯಾತ್ಮ ಧಾರ್ಮಿಕ ರಾಷ್ಟ್ರೀಯ
ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ
ಧಾರ್ಮಿಕ ರಾಜ್ಯ

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಹೊರವಲಯದಲ್ಲಿ ಶೀಘ್ರದಲ್ಲೇ ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿ ಮಾದರಿಯ ವೆಂಕಟೇಶ್ವರ ಸ್ವಾಮಿ ದೇಗುಲ ತಲೆಯೆತ್ತಲಿದೆ. ನಗರದ ಸಮೀಪವಿರುವ ಕೋಳಿಕೊಪ್ಪ ಗ್ರಾಮದ ಗುಡ್ಡದ ಮೇಲೆ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಾಣವಾಗಲಿದೆ. 7 ಎಕರೆ ಜಮೀನು ಹಸ್ತಾಂತರ​ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ಮೀಸಲಿಡಲಾಗಿದ್ದ 7 ಎಕರೆ ಜಮೀನನ್ನು ಅಧಿಕೃತವಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭೂಮಿಯ…

ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ

ಕಲ್ಲುಗುಂಡಿ: ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ಸಂಯುಕ್ತಾಶ್ರಯದಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್(ಮುಂಜಿ) ಕಾರ್ಯಕ್ರಮ ಏಪ್ರಿಲ್ 12ರಂದು ಕಲ್ಲುಗುಂಡಿಯ ಸುನ್ನೀ ಸೆಂಟರ್‌ನಲ್ಲಿ ಯಶಸ್ವಿಯಾಗಿ ನೆರವೇರಿತು. ಡಾ. ಮುಹಮ್ಮದ್ ಫಯಾಝ್ ಮಂಜನಾಡಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಾಮಾಜಿಕ ಸೇವೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಯಿತು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅವರು ಮಾತನಾಡಿ ಇಂತಹ ಸೇವಾ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. ಬದ್ರಿಯಾ…

ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ
ಧಾರ್ಮಿಕ ಪ್ರಾದೇಶಿಕ
ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಧಾರ್ಮಿಕ ರಾಷ್ಟ್ರೀಯ

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ಚೈತ್ರ ಮಾಸದ ಆಗಮನ ಹಾಗೂ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಸಂದೇಶ ನೀಡಿರುವ ಅವರು, "ಯುಗಾದಿ, ಗುಡಿ ಪಾಡ್ವಾ, ಚೈತ್ರ ಶುಕ್ಲಾದಿ, ಉಗಾದಿ, ನವ್ರೇಹ್ ಮತ್ತು ಚೇತಿ ಚಂದ್ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.​ ಸಮೃದ್ಧಿಯ ಸಂಕೇತ:ಈ ಹಬ್ಬಗಳು ಭಾರತದ…

ಕ್ರೀಡೆ

ಮಂಗಳೂರು: ಯುವಕನಿಗೆ ಚೂರಿ ಇರಿದು ಹತ್ಯೆ..!
ರಾಜ್ಯ

ಮಂಗಳೂರು: ಯುವಕನಿಗೆ ಚೂರಿ ಇರಿದು ಹತ್ಯೆ..!

ಯುವಕನೋರ್ವನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರ ಹೊರವಲಯದ ಉಳ್ಳಾಲ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತ ಕಾಲನಿ ಎಂಬಲ್ಲಿ ನಡೆದಿದೆ.ಸಾರಸ್ವತ ಕಾಲನಿ ನಿವಾಸಿ ವರುಣ್ (28) ಹತ್ಯೆಗೊಳಗಾದ ಯುವಕ. ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು.…

ಮಂಗಳೂರು: ಪ್ರಯಾಣಿಕರೇ ಗಮನಿಸಿ…ಬೆಂಗಳೂರು ಮಂಗಳೂರು ರೈಲು ಸಂಚಾರ ಒಂದು ವಾರ ರದ್ದು
ರಾಜ್ಯ

ಮಂಗಳೂರು: ಪ್ರಯಾಣಿಕರೇ ಗಮನಿಸಿ…ಬೆಂಗಳೂರು ಮಂಗಳೂರು ರೈಲು ಸಂಚಾರ ಒಂದು ವಾರ ರದ್ದು

ಬೆಂಗಳೂರು: ಹಾಸನ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣ ಕಾಮಗಾರಿಗಾಗಿ ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.ಡಿಸೆಂಬರ್ 14 ರಿಂದ 18 ರ ಅವಧಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ…

ಮಂಗಳೂರು: ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಸಾವು..!
ರಾಜ್ಯ

ಮಂಗಳೂರು: ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಸಾವು..!

ಮಂಗಳವಾರ ಸಂಜೆ 4 ರ ಸುಮಾರಿಗೆ ನಗರದ ಲೇಡಿಹಿಲ್ ಬಳಿಯ ಮಂಗಳೂರು ಮಹಾನಗರಪಾಲಿಕೆಯ ಈಜುಕೊಳದಲ್ಲಿ ವ್ಯಕ್ತಿಯೋರ್ವರು ಮುಳುಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಮೃತನನ್ನು ಬಿಹಾರ ಮೂಲದ ಅಭಿಷೇಕ್ (35) ಎಂದು ಗುರುತಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ವಹಣೆ ಮಾಡುವ ಈ ಈಜುಕೊಳದಲ್ಲಿ ಈಜುವಾಗ ಈ ದುರ್ಘಟನೆ ಸಂಭವಿಸಿದೆ ಎಂದು…

ಸಿರಿಕುರಲ್ ನಗರ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ
ರಾಜ್ಯ

ಸಿರಿಕುರಲ್ ನಗರ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ

ಸಿರಿಕುರಲ್ ನಗರ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ:ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮಕ್ಕೆ ಒಳಪಡುವ ಪೆರಾಜೆ ಗ್ರಾಮದ ಬಳಿ ಕಲ್ಚರ್ಪೆಯ ಸಿರಿ ಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಉತ್ಸವ ಸಮಿತಿಯ ಆಶ್ರಯಲ್ಲಿ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ…

ಬೆಳ್ತಂಗಡಿ : ಬಸ್ಸು ಹತ್ತುವಾಗ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಲೆ ಎಗರಿಸಿದ ಕಳ್ಳರು
ರಾಜ್ಯ

ಬೆಳ್ತಂಗಡಿ : ಬಸ್ಸು ಹತ್ತುವಾಗ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಲೆ ಎಗರಿಸಿದ ಕಳ್ಳರು

ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಮಹಿಳೆಯು ಬಸ್ಸು ಹತ್ತುವಷ್ಟರಲ್ಲಿ ಕೊರಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಮಾಲೆಯನ್ನು ದೋಚಿದ ಘಟನೆ ನಡೆದಿದೆ.ಉಜಿರೆ ನಿವಾಸಿ ವಾರಿಜ ಟಿ (53) ಅವರು ಮಂಗಳವಾರ ಸಂಜೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆ ಎಸ್ ಆರ್ ಟಿ ಸಿ ಬಸ್ಸು ಹತ್ತುವಷ್ಟರಲ್ಲಿ ಯಾರೋ…

ಮರ್ಕಂಜದ ಕಟ್ಟಕೋಡಿ ಚೀಮಾಡಿನಲ್ಲಿ ಚಿರತೆ ಕಾಟ
ರಾಜ್ಯ

ಮರ್ಕಂಜದ ಕಟ್ಟಕೋಡಿ ಚೀಮಾಡಿನಲ್ಲಿ ಚಿರತೆ ಕಾಟ

ಹಟ್ಟಿಯಲ್ಲಿ ಕಟ್ಟಿದ್ದ ಕರು ಬಲಿ, ಸ್ಥಳೀಯರಲ್ಲಿ ಆತಂಕ.ಮರ್ಕಂಜ ಗ್ರಾಮದ ಕಟ್ಟಕೋಡಿ, ಚೀಮಾಡು ಪ್ರದೇಶಗಳಲ್ಲಿ ಕಳೆದ ವಾರದಿಂದ ಚಿರತೆ ಕಾಟ ಶುರುವಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.ಡಿ.5 ರಂದು ರಾತ್ರಿ ಚೀಮಾಡಿನಲ್ಲಿರುವ ಗಿರೀಶ ಕುದ್ಕುಳಿ ರವರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಹೊತ್ತೊಯ್ದ ಘಟನೆ ನಡೆದಿದ್ದು ಅಡ್ತಲೆ ಸಮೀಪದ ಗಿರೀಶ್ ರವರ…

ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗೆ ಉಚಿತ ಮೇವಿನ ಬೀಜ:ಇಲಾಖೆಯನ್ನು ಸಂಪರ್ಕಿಸಲು ಡಾ. ನಿತಿನ್ ಪ್ರಭು ಸೂಚನೆ.
ರಾಜ್ಯ

ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗೆ ಉಚಿತ ಮೇವಿನ ಬೀಜ:ಇಲಾಖೆಯನ್ನು ಸಂಪರ್ಕಿಸಲು ಡಾ. ನಿತಿನ್ ಪ್ರಭು ಸೂಚನೆ.

2023-24ನೇ ಸಾಲಿನ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಆಸಕ್ತ ರೈತರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಿವಿಧ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯ ಗಳನ್ನು ಸಂಪರ್ಕಿಸಿ ಉಚಿತವಾಗಿ ಮೇವಿನ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯಕ್ಕೆ ಇಲಾಖೆಯ ವಿವಿಧ ಸಂಸ್ಥೆಗಳಲ್ಲಿ…

ಹಾಲಿನ ಬೂತ್ ಎದುರಿಗಿದ್ದ ಜೋಡಿಸಿದ್ದ ಹಾಲಿನ ಕ್ರೇಟ್ ಗಳಿಗೆ ಪಿಕಪ್ ವಾಹನ ಡಿಕ್ಕಿ-  ದ್ವಿಚಕ್ರ ಮತ್ತು ಸೈಕಲ್ ಸವಾರರು ಪಾರು..!
ರಾಜ್ಯ

ಹಾಲಿನ ಬೂತ್ ಎದುರಿಗಿದ್ದ ಜೋಡಿಸಿದ್ದ ಹಾಲಿನ ಕ್ರೇಟ್ ಗಳಿಗೆ ಪಿಕಪ್ ವಾಹನ ಡಿಕ್ಕಿ- ದ್ವಿಚಕ್ರ ಮತ್ತು ಸೈಕಲ್ ಸವಾರರು ಪಾರು..!

ಅತಿವೇಗವಾಗಿ ಬಂದ ಪಿಕಪ್ ವಾಹನ ಚಾಲಕನೊಬ್ಬ ಮಿಲ್ಕ್ ಬೂತ್‌ನ ಎದುರಿಗಿದ್ದ ಹಾಲಿನ ಕ್ರೇಟ್‌ ಗಳಿಗೆ ಡಿಕ್ಕಿ ಹೊಡೆದ ಘಟನೆ ಕಡಿಯಾಳಿಯಲ್ಲಿ ನಡೆದಿದ್ದು ಡಿಕ್ಕಿ ಹೊಡೆದು ಹೋದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ರಾಷ್ಟ್ರೀಯ ಹೆದ್ದಾರಿಯ ಮಿಲ್ಕ್ ಬೂತ್ ನ ಎದುರು ಹತ್ತಾರು ಹಾಲಿನ ಕ್ರೇಟ್ ಗಳನ್ನು ಜೋಡಿಸಿಡಲಾಗಿತ್ತು.ಈ ವೇಳೆ ದ್ವಿಚಕ್ರ…

ವಿಟ್ಲ: ಈಜಲು ಬಾರದೆ 24ರ ಹರೆಯದ ಯುವಕ ಜಾರಿ ಬಿದ್ದು ಮೃತ್ಯು; ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ನಡೆದ ದುರ್ಘಟನೆ
ರಾಜ್ಯ

ವಿಟ್ಲ: ಈಜಲು ಬಾರದೆ 24ರ ಹರೆಯದ ಯುವಕ ಜಾರಿ ಬಿದ್ದು ಮೃತ್ಯು; ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ನಡೆದ ದುರ್ಘಟನೆ

ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿರುವಾಗ ಯುವಕನೋರ್ವ ಜಾರಿ ಬಿದ್ದು ಈಜಲು ಬಾರದೆ ಮೃಪಟ್ಟ ಘಟನೆ ವಿಟ್ಲ ಸಮೀಪ ಕುದ್ದುಪದವು ಎಂಬಲ್ಲಿ ನಡೆದಿದೆ. ಉಕ್ಕುಡ ದರ್ಬೆ ನಿವಾಸಿ ಕಾರ್ತಿಕ್(24) ಮೃತ ದುರ್ದೈವಿ ಎಂದು ತಿಳಿದುಬಂದಿದೆ.ಈತ ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿರುವಾಗ ಕಾಲು ಜಾರಿ ಬಿದ್ದು ಈಜಲು…

ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ನಗರ ಪೊಲೀಸರು : ಜಾನುವಾರು ಸಹಿತ ಇಬ್ಬರು ವಶ
ರಾಜ್ಯ

ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ನಗರ ಪೊಲೀಸರು : ಜಾನುವಾರು ಸಹಿತ ಇಬ್ಬರು ವಶ

ಬಂಟ್ವಾಳ ಸಮೀಪದ ಟಿಪ್ಪು ನಗರ ಎಂಬಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ನಗರ ಠಾಣಾಧಿಕಾರಿ ರಾಮಕೃಷ್ಣ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ದನಗಳನ್ನು ಸಾಗಾಟ ಮಾಡುತ್ತಿದ್ದ KA-19-MF-4460 ನೋಂದಣಿ ಸಂಖ್ಯೆಯ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI