ಸುಳ್ಯದ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಂನಲ್ಲಿ ಕಾರ್ಯಚರಿಸುತ್ತಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಖರೀದಿ ಹಬ್ಬಕ್ಕೆ ಮೇ 15ರಂದು ಸಂಜೆ ಚಾಲನೆ ದೊರೆಯಿತು.
ಜೇಸಿಐ ಸುಳ್ಯ ಸಿಟಿ ಅಧ್ಯಕ್ಷೆ

ಶ್ರೀಮತಿ ನಾಗವೇಣಿ ಮತ್ತು ಭರತನಾಟ್ಯ ಶಿಕ್ಷಕಿ ಶ್ರೀಮತಿ ಇಂದುಮತಿ ನಾಗೇಶ್ ರವರು ದೀಪ ಬೆಳಗಿಸಿ ಶುಭ ಹಾರೈಸಿದರು.
ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸ್ವರ್ಣಂ ಸಂಸ್ಥೆಯ ಪಾಲುದಾರಾದ ಭವಿತ್, ಲೋಕೇಶ್, ಸಿಬ್ಬಂದಿಗಳಾದ ಶ್ರೀಮತಿ ಅಶ್ವಿನಿ ಪ್ರವೀಣ್, ಶೋಧನ್, ಬೇಬಿ ವಾಮಿಕ ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರ ಪ್ರವೀಣ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇನ್ನೋರ್ವ ಪಾಲುದಾರ ಸಂಜೀವ ವಂದಿಸಿದರು.
ವಿಶೇಷ ಆಕರ್ಷಣೆಯಾಗಿ ಆಂಟಿಕ್ ಗೋಲ್ಡ್ ಕೋಟೆಡ್ ಸಿಲ್ವರ್ ಆಭರಣಗಳು ಸಂಸ್ಥೆಯಲ್ಲಿದ್ದು, ಬೆಳ್ಳಿ ಆಭರಣ ಖರೀದಿಗಳಲ್ಲಿ 10% ವರೆಗೆ ರಿಯಾಯಿತಿ, ಹಳೆಯ ಬೆಳ್ಳಿ ಆಭರಣಗಳನ್ನು ಎಂಜ್ ಮಾಡಿ ಹೊಸ ಬೆಳ್ಳಿ ಆಭರಣಗಳನ್ನು ಕೂಡ ಖರೀದಿಸಬಹುದು ಎಂದು ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

