
ಬೆಳ್ತಂಗಡಿ: ಸಹಾಯ ಮಾಡುವ ಹೆಸರು ಹೇಳಿ ಬ್ಯಾಂಕ್ ಖಾತೆಯಿಂದ ಇನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಅಬೂಬಕ್ಕರ್ (71) ಅವರ ಹಣ ಎಗರಿಸಿದ ಘಟನೆ ಬೆಳ್ತಂಗಡಿ ಗೇರಕಟ್ಟೆ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ನಡೆದಿದೆ.

ಅ.2 ರಂದು ಮಧ್ಯಾಹ್ನ 12 ಗಂಟೆಗೆ ಹಣ ಡ್ರಾ ಮಾಡುತ್ತಿರುವಾಗ ಒಳ ಪ್ರವೇಶಿಸಿದ ಅಪರಿಚಿತರಿಬ್ಬರು ಹಿಂದಿಯಲ್ಲಿ ಮಾತಾಡಿ ಸಹಾಯಕ್ಕೆ ಬಂದಿದ್ದರು. ಅಬಾಬಕ್ಕರ್ ಸಹಾಯದ ಅಗತ್ಯ ಇಲ್ಲ ಎಂದು ಹೇಳಿದರೂ, ಒಳಗಡೆಯೇ ನಿಂತಿದ್ದರು. ಮಧ್ಯಾಹ್ನ 12 ಗಂಟೆಗೆ ಹಣ ತೆಗೆದು ಎಟಿಎಂ ಕೇಂದ್ರದಿಂದ ಕಾರ್ಡ್ ಸಹಿತ ಹೊರಗೆ ಹೋಗಿದ್ದರು. ನಂತರ ಅ.4 ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಹೋದಾಗ ಕಾರ್ಡ್ ರೀಡ್ ಆಗಲಿಲ್ಲ.ಅನುಮಾನದಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಎಟಿಎಂ ಕಾರ್ಡ್ ಬದಲಾಗಿದೆ ಎಂದು ತಿಳಿಸಿದ್ದು, ನಂತರ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿದ್ದ 49,200 ರೂ. ಅನ್ನು ವಂಚಿಸಿರುವುದು ಗೊತ್ತಾಯಿತು.ಅ.2 ರಂದು ಎಟಿಎಂ ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಎಟಿಎಂ ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
