ಜ.29.ರಿಂದ ಜ.31 ರ ವರೆಗೆ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹ ಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ.

ಜ.29.ರಿಂದ ಜ.31 ರ ವರೆಗೆ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹ ಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ.


ಜ.29.ರಿಂದ ಜ.31 ರ ವರೆಗೆ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ವಾರ್ಷಿಕ ಉತ್ಸವನಡೆಯಲಿದೆ ಎಂದು ಕಾಂತಮಂಗಲ ಕುರುಂಜಿ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ ವಿ ತಿಳಿಸಿದ್ದಾರೆ. ಜ.29 ರವಿವಾರ ಸಂಜೆ ಗೂದೂಳಿ ಲಗ್ನದಲ್ಲಿ ಶ್ರೀ ಕ್ಷೇತ್ರ ಗುತ್ಯಮ್ಮ ದೇವಿ ಮತ್ತು ಸಹ ಪರಿವಾರ ದೈವಗಳ ಕವಾಟ ಉದ್ಘಾಟನೆ, ದೇವರ ಪ್ರಾರ್ಥನೆ,ವಾಸು ಪೂಜೆ, ಕ್ಷೇತ್ರ ಶುದ್ದೀಕರಣ ನಡೆಯುತ್ತಿದ್ದು, ಜ.30 ರಂದು ಬೆಳಿಗ್ಗೆ ಗಂಟೆ 8.00ರಿಂದ ಸ್ವಸ್ತಿ ಪುಣ್ಯಾಹವಾಚನೆ ನಿರ್ಮಾಲ್ಯ ವಿಸರ್ಜನೆ ಪೂಜೆ, ಪ್ರತ್ಯೇಕ ಪ್ರತ್ಯೇಕ ಕಲಶಾಧಿವಾಸ, ಪ್ರಧಾನ ಹೋಮ, ಪಂಚಾಮೃತ ಸಹಿತ ಕಲಶಾಭಿಷೇಕ, ದೇವತಾರಾಧನೆ,ದೈವರಾಧನೆ, ಪ್ರಸನ್ನ ಪೂಜೆ, ರಾತ್ರಿ ಸಂಧ್ಯಾಕಾಲ ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ
ನಾಗ ದೇವರಲ್ಲಿ ಪುಣ್ಯಾಹವಾಚನೆ, ಪವಮಾನಯಾಗ,
ನವಕ ಪ್ರಧಾನ, ಪಂಚಾಮೃತ ಸಹಿತಕಲಶಾಭಿಷೇಕ,
ರಕ್ರೇಶ್ವರಿ ಆರಾಧನೆ, ಆಶ್ಲೇಷ ಬಲಿ ಪೂಜೆ,
ನಾಗದೇವರ ತಂಬಿಲ, ಪ್ರಸನ್ನ ಪೂಜೆ.ನಡೆಯಲಿದೆ ಜ.31 ರಂದು ಬೆಳಗ್ಗೆ ಗಂಟೆ 8.00ರಿಂದ ಸ್ವಸ್ತಿ ಪುಣ್ಯಾಹವಾಚನೆ,
ನಿರ್ಮಾಲ್ಯ ವಿಸರ್ಜನೆ,ರುದ್ರ ಹೋಮ, ನವಗ್ರಹ ಹೋಮ,ಚಂಡಿಕಾ ಹೋಮ-ಪೂರ್ಣಾಹುತಿ 12.30ಕ್ಕೆ
ದೈವ ದೇವರ ಆರಾಧನೆ ಮಧ್ಯಾಹ್ನ ಗಂಟೆ 1.00ರಿಂದ
ಅನ್ನಸಂತರ್ಪಣೆ ಸಾಯಂಕಾಲ ಗಂಟೆ 5.30ಕ್ಕೆ ಸಂಧ್ಯಾಕಾಲ ಗುತ್ಯಮ್ಮ ದೇವಿಗೆ ರಂಗ ಪೂಜಾ ಸೇವೆ ನಡೆಯಲಿದೆ.


ಸುಳ್ಯ ಕಾಂತಮಂಗಲ ಕುರುಂಜಿ ಡಾ ರೇಣುಕಾ ಪ್ರಸಾದ್ ಮನೆ ಸಮೀಪದ ರಸ್ಥೆಯಲ್ಲಿ ತುಸು ದೂರ ಕ್ರಮಿಸಿದರೆ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ ಗೋಚರವಾಗುತ್ತದೆ, ಜನರ ನಿರೀಕ್ಷೆಗೂ ಮೀರಿ ಅತಿ ಸುಂದರವಾಗಿ ಸಂಪೂರ್ಣ್ ಶಿಲೆಯಿಂದಲ ನಿರ್ಮಿತಗೊಂಡ ಈ ದೇವಾಲಯವನ್ನು ನೂಡುವುದೇ ಸೊಬಗು ಅತೀ ವಿಶಾಲವಾದ ಜಾಗದಲ್ಲಿ ಪಯಸ್ವಿನಿ ನದಿ ತಟದ ಅನತಿ ದೂರದಲ್ಲಿರುವ ದೇವಸ್ಥಾನ ವನ್ನು ಡಾ ರೇಣುಕಾಪ್ರಸಾದ್ ಕೆ .ವಿ ಮಾರ್ಗದರ್ಶನದಲ್ಲಿ ನಿರ್ಮಿಸಿದ್ದು, ನಿಜಕ್ಕೂ ತಾಲೂಕಿನಲ್ಲಿ ಈ ರೀತಿಯ ಅದ್ಬುತ ಕರ ಕುಶಲತೆಯಿಂದ ನಿರ್ಮಿತ ಮತ್ತೊಂದು ದೇವಸ್ಥಾನವನನ್ನು ಯಾರೂ ನೋಡಿರಲು ಸಾದ್ಯವೇ ಇಲ್ಲ ,ಈ ಕ್ಷೇತ್ರದಲ್ಲಿ ಶ್ರೀ ದೇವಿ ಗುತ್ಯಮ್ಮನವರು, ಶ್ರೀ ಬ್ರಹ್ಮರು,ನಾಗ ನಾಗಬ್ರಹ್ಮ, ಪಿಲಿಚಾಮುಂಡಿ, ಧೂಮಾವತಿ,ಅಣ್ಣಪ್ಪ ಪಂಜುರ್ಲಿ, ಸಿರಿ ಕುಮಾರರು,ಕಲ್ಲುರ್ಟಿ ಪಂಜುರ್ಲಿ,ಬಳ್ಳಾಳ ಬಳ್ಳಾಲ್ತಿ,
ನಂದಿ ಕೋಣ, ಕ್ಷೇತ್ರಪಾಲ,ನೀಚ ಬೊಬ್ಬರ್ಯ
ಶ್ರೀ ಗುತ್ಯಮ್ಮ ದೇವಿಯ ಪ್ರಾಕಾರದಲ್ಲಿರುವ ಸ್ಥಾನಗಳಿವೆ.ಅಲ್ಲದೆ ತೀರ್ಥಮಂಟಪ, ತೀರ್ಥಬಾವಿ ಅಯ್ಯಂಗಾಯಿ,ಪೆರಿಂಬಲಿ ಕಲ್ಲು, ಧ್ವಜಕಟ್ಟೆ ಸೇರಿದಂತೆ ಹಲವು ವಿಶೇಷತೆ ಇಲ್ಲಿವೆ.

ರಾಜ್ಯ