
ಶಫಾಲಿ ವರ್ಮಾ ನಾಯಕತ್ವದ ಭಾರತ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಅಮೋಘ ಜಯ ಸಾಧಿಸಿದೆ. ಇಂದು ಸೌತ್ ಆಫ್ರಿಕಾದ ಸೆನ್ವೆಸ್ ಪಾರ್ಕ್, ಪೊಟ್ಚೆಫ್ಸ್ಟ್ರೂಮ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 17.1 ಓವರ್ ನಲ್ಲಿ ಕೇವಲ 68 ರನ್ ಗಳಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು.


ಭಾರತದ ಪರ ಟೈಟಾಸ್ ಸಾಧು, ಅರ್ಚನಾ ದೇವಿ, ಪಾರ್ಶವಿ ಚೋಪ್ರ ತಲಾ 2 ಎರಡು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ನಾಯಕಿ ಶಫಾಲಿ ವರ್ಮಾ, ಸೋನಮ್ ಯಾದವ್, ಮನ್ನತ್ ಕಶ್ಯಪ್ ತಲಾ 1 ವಿಕೆಟ್ ಪಡೆದರು.
ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡ ಕೇವಲ 14 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು ವಿಜಯಶಾಲಿಯಾಯಿತು.
ಭಾರತದ ಪರ ನಾಯಕಿ ಶಫಾಲಿ ವರ್ಮಾ 11 ಎಸೆತದಲ್ಲಿ 15, ಶ್ವೇತಾ ಸೆಹ್ರಾವತ್ 6 ಎಸೆತದಲ್ಲಿ 5,ಸೌಮ್ಯ ತಿವಾರಿ 37 ಎಸೆತದಲ್ಲಿ 24, ಗೊಂಗಡಿ ತ್ರಿಶಾ 29 ಎಸೆತದಲ್ಲಿ 24 ಗಳಿಸಿ ತಂಡವನ್ನು ವಿಜಯದತ್ತ ಕೊಂಡೊಯ್ದರು.