
ಉತ್ತರಪ್ರದೇಶದ ಎಕಾನಾ ಸ್ಪೋರ್ಟ್ಸ್ ಸಿಟಿಯಲ್ಲಿ ಇಂದು ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ದ್ವಿತೀಯ T20 ಪಂದ್ಯ ದಲ್ಲಿ ಭಾರತ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತ ಇರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ನ್ಯೂಜಿಲ್ಯಾಂಡ್ ತಂಡ ನಿಗದಿತ 20 ಓವರಿಗೆ 8 ವಿಕೇಟ್ ನಷ್ಟಕ್ಕೆ ಕೇವಲ 99 ರನ್ ಗಳಿಸಲಷ್ಟೇ ಸಾದ್ಯವಾಯಿತು.
100 ರನ್ನು ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 19.5 ಓವರ್ ಗೆ 4 ವಿಕೇಟ್ ಕಳೆದುಕೊಂಡು ಗುರಿ ತಲುಪಿತು.
ಭಾರತದ ಪರ ಶುಭಮನ್ ಗಿಲ್ 11, ಇಶಾನ್ ಕಿಶನ್ 19, ರಾಹುಲ್ ತ್ರಿಪಾಠಿ 13, ಸೂರ್ಯಕುಮಾರ್ ಯಾದವ್ 26, ಹಾರ್ದಿಕ್ ಪಾಂಡ್ಯ 15, ವಾಷಿಂಗ್ಟನ್ ಸುಂದರ್ 10,ರನ್ ಗಳಿಸಿ ತಂಡವನ್ನು ಸರಣಿ ಸೋಲಿನಿಂದ ಪಾರು ಮಾಡಿದರು.ಕೊನೆಯ ಪಂದ್ಯ ಫೆಬ್ರವರಿ 1 ರಂದು ಗುಜರಾತಿನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.