
ಜೇಸಿಐ ಸುಳ್ಯ ಸಿಟಿ ಘಟಕದವತಿಯಿಂದ ಒಂದು ವಾರಗಳ ಜೇಸಿಐ ಸಪ್ಥಾಹ ಕಾರ್ಯಕ್ರಮ “ಡೈಮಂಡ್-2024” ಎಂಬ ಶೀರ್ಷಿಕೆಯಡಿ ಇಂದು ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆಯಲ್ಲಿ ಉದ್ಘಾಟನೆಗೊಂಡಿತು.
ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಚಿನ್ನದ ಪ್ರಶಸ್ತಿ ವಿಜೇತರಾಗಿರುವ ಸುಳ್ಯ ತಾಲೂಕಿನ ಪ್ರಸಿದ್ದ ಕರಾಟೆ ಪಟು ಹಾಗು ಕರಾಟೆ ಶಿಕ್ಷಕರು ಅಲ್ಲದೆ ಜೇಸಿಐ ಸುಳ್ಯ ಸಿಟಿ ಘಟಕದ ಪೂರ್ವಾದ್ಯಕ್ಷರು ಆಗಿರುವ ಜೇಸಿ ಚಂದ್ರಶೇಖರ ಕನಕಮಜಲು ಸಪ್ಥಾಹ ಉದ್ಘಾಟನೆ ನೆರವೇರಿಸಿ ಏಳು ದಿನದ ವೈವಿದ್ಯ ಕಾರ್ಯಕ್ರಮಗಳು ಯಶಸ್ವಿಯಾಗಲೆಂದು ಶುಭಹಾರೈಸಿದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆಯ ಸಂಚಾಲಕರಾದ ಜೇಸಿ ವಿನಯರಾಜ್ ಮಡ್ತಿಲ ಮಾತನಾಡಿ ವ್ಯಕ್ತಿತ್ವ ವಿಕಸನ ಸಂಸ್ಥೆ ಜೇಸಿಯಲ್ಲಿ ಯುವ ಸಮುದಾಯ ತೊಡಗಿಕೊಳ್ಳುವ ಮೂಲಕ ಸಂಪನ್ಮೂಲ ವ್ಯಕ್ತಿಗಳಾಗಿ ಮೂಡಿಬಂದು ದೇಶಕಟ್ಟುವ ಕೆಲಸವಾಗಬೇಕೆಂದು ತಿಳಿಸಿದರು. ಜೇಸಿಐ ಸುಳ್ಯ ಸಿಟಿ ಘಟಕದ ಸ್ಥಾಪಕರಾದ ಜೇಸಿ ಮನಮೋಹನ ಬಳ್ಳಡ್ಕ ಪ್ರಾಸ್ಥಾವಿಕ ಮಾತನಾಡಿ ಜೇಸಿ ಸಂಸ್ಥೆ ಹಾಗು ಸಪ್ಥಾಹದ ಹಿನ್ನಲೆ ಅಲ್ಲದೆ ಏಳು ದಿನದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಪ್ಥಾಹ ನಿರ್ದೇಶಕಿ ಜೇಸಿ ಅನಿತಾ ಪಾನತಿಲ ವಂದಿಸಿದರು. ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆಯ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


