

ಮಳೆಗಾಲ ಬಂತೆಂದರೆ ರೈತರಿಗೆ ಇನ್ನಿಲ್ಲದ ಹುರುಪು, ತಾವು ಬೆಳೆವ ಬೆಳೆಯ ಜೊತೆ ಇನ್ನಿತರ ಬೆಳೆಗಳನ್ನು ಬೆಳೆಸಿ ಸಮೃದ್ಧರಾಗುವ ಕನಸು, ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಿಕೆ ಪ್ರಮುಖವಾಗಿ ಬೆಳೆಯುವ ವಾಣಿಜ್ಯ ಬೆಳೆ, ಇದರ ಜೊತೆಗೆ ಇಲ್ಲಿ ರಬ್ಬರ್, ಗೇರು ಕೃಷಿ, ತೆಂಗು, ಕರಿಮೆಣಸು, ಕಾಫೀ,ಪ್ರಮುಖ ಬೆಳೆ ಇದೀಗ ಕೋಕೊ ಕೂಡ ತನ್ನ ದಾರಣೆಯ ಹಿನ್ನಲೆಯಲ್ಲಿ ಮುನ್ನಲೆಗೆ ಬಂದು ರೈತರು ಇಂದು ಮಿಶ್ರ ಬೆಳೆಯ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಗೊಳಿಸಿದ್ದಾರೆ,


ಪ್ರಸ್ತುತ, ಮಾರುಕಟ್ಟೆಯಲ್ಲಿ ಅಡಿಕೆ ಮಾತ್ರವಲ್ಲದೆ,ರಬ್ಬರ್, ಕರಿಮೆಣಸು, ಕಾಫೀ, ಕೋಕೋ, ಅತ್ಯುತ್ತಮ ಧಾರಣೆಯನ್ನು ಹೊಂದಿದೆ, ಬಹುತೇಕ ಕಡೆ ರಬ್ಬರ್ ಮರಗಳನ್ನು ಕಡಿದು ರಿ ಪ್ಲಾಂಟೇಷನ್ ಮಾಡಲಾಗುತ್ತಿದೆ, ಅಲ್ಲದೆ, ಅಡಿಕೆ , ಕೊಕೊ ,ಗೇರು, ಕರಿಮೆಣಸು ಗಿಡಗಳನ್ನು ಬೆಳೆಯಲು ರೈತರು ಮನಸು ಮಾಡುತ್ತಿದ್ದಾರೆ,ಆದರೆ ಇದಕ್ಕೆ ಉತ್ತಮ ಗಿಡಗಳ ಅವಶ್ಯಕತೆ ರೈತರನ್ನು ಕಾಡುತ್ತದೆ,

ಅದಕ್ಕಾಗಿ ಸುಳ್ಯದ ಬೊಳುಬೈಲಿನಲ್ಲಿ ದೇವ ನರ್ಸರಿ ಉತ್ತಮ ವಾಗಿ ಪೋಷಣೆ ಮಾಡಿದ ಆರೋಗ್ಯ ಪೂರ್ಣ ಗಿಡಗಳನ್ನು ರೈತರಿಗೆ ಪೂರೈಸುವ ಚಿಂತನೆಯಿಂದ ಲಕ್ಷಾಂತರ ಗಿಡಗಳನ್ನು ರೈತರಿಗೆ ಪೂರೈಸಲು ಸಿದ್ದವಾಗಿದೆ. ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಪುತ್ತೂರಿನಿಂದ ಸುಳ್ಯ ಸಂಪರ್ಕಿಸುವ ಮಾರ್ಗದ ಮದ್ಯೆ ಜಾಲ್ಸೂರು ದಾಟಿ ಸುಳ್ಯ ಬಂದಾಗ ಸಿಗುವ ಸ್ಥಳ ಬೊಳುಬೈಲು , ಇಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ “ದೇವ” ನರ್ಸರಿ ಕಾಣ ಸಿಗುತ್ತದೆ.

ಇಲ್ಲಿ ಉತ್ತಮ ದರ್ಜೆಯ ರಬ್ಬರ್ ಗಿಡ, ವಿವಿದ ತಳಿಯ ಅಡಿಕೆ ಗಿಡ, ಕಷಿ ಕಟ್ಟಿದ ಕರಿಮೆಣಸು, ತೆಂಗಿನ ಗಿಡ, ಗೇರು ಗಿಡ, ಕೊಕೊ ಗಿಡ, ಅಲ್ಲದೆ ವಿವಿದ ಹಣ್ಣಿನ ಗಿಡಗಳು , ಔಷದ ಗಿಡಗಳ ಅಪೂರ್ವ ಸಂಗ್ರಹವಿದೆ, ತಮ್ಮ ಆಯ್ಕೆಯ ಗಿಡಗಳನ್ನು ಆಯ್ದುಕೊಳ್ಳಲು, ಇವರನ್ನು 9741748719 ಮತ್ತು 9448318719 ಸಂಖ್ಯೆಯನ್ನು ಸಂಪರ್ಕಿಸಬಹುದು.



