ಸುಳ್ಯ: ಕಾಂತಮಂಗಲದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (ಅಂಚೆ ಅಜ್ಜಾವರ, ಸುಳ್ಯ ತಾಲೂಕು, ದ.ಕ.) ಆ. 17ರ ಸೋಮವಾರದಂದು ‘ನಾಗರ ಪಂಚಮಿ’ ಮಹೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ.

ಪೂರ್ವಾಹ್ನ 8:00 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ನಾಗದೇವರಿಗೆ ತಂಬಿಲ ಸೇವೆ, ಹಾಲು ಅಭಿಷೇಕ, ಬಲಿವಾಡು ಕೂಟ ಹಾಗೂ ದೇವಾಲಯದ ನಿತ್ಯಸೇವೆಗಳು ನೆರವೇರಲಿವೆ. ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.


ಇದರ ಜೊತೆಗೆ, ಬರುವ ಸೆಪ್ಟೆಂಬರ್ 12 (12-09-2026) ರಂದು ‘ಸೋಣ ಶನಿವಾರ’ ಆಚರಣೆ ಹಾಗೂ ಬಲಿವಾಡು ಕೂಟ ನೆರವೇರಲಿದೆ ಎಂದು ಸೇವಾ ಸಮಿತಿ, ಆಡಳಿತ ಮೊಕ್ತೇಸರರು ಮತ್ತು ಸರ್ವಸದಸ್ಯರು ತಿಳಿಸಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವತಾ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.

