ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನಕ್ಕೆ ನುಗ್ಗಿದ ಖದೀಮರು :ಕಾಣಿಕೆ ಡಬ್ಬಿ ಕಳವು..!!

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನಕ್ಕೆ ನುಗ್ಗಿದ ಖದೀಮರು :ಕಾಣಿಕೆ ಡಬ್ಬಿ ಕಳವು..!!

ವಿಟ್ಲ: ದೈವಸ್ಥಾನಕ್ಕೆ ನುಗ್ಗಿದ ಖದೀಮರು ಕಾಣಿಕೆ ಡಬ್ಬಿ
ಕಳವುಗೈದ ಘಟನೆ ವಿಟ್ಲ ಮೇಗಿನ ಪೇಟೆಯ ಶ್ರೀ
ಮಹಮ್ಮಾಯಿ ಅಮ್ಮನವರ ದೈವಸ್ಥಾನದಲ್ಲಿ ನಡೆದಿದೆ.ಜ.26 ರಿಂದ 27ರವರೆಗೆ ದೈವಸ್ಥಾನದಲ್ಲಿ ವಾರ್ಷಿಕ ಪೂಜೆ ನಡೆದಿದ್ದು, ಇಂದು ಬೆಳಿಗ್ಗೆ ಎಂದಿನಂತೆ ದೈವಸ್ಥಾನಕ್ಕೆ ದೀಪ ಇಡಲು ಹೊನ್ನಪ್ಪ ರವರು ಬಂದ ವೇಳೆ ಕಾಣಿಕೆ ಡಬ್ಬಿ ಕಳವುಗೈದಿರುವುದು ಬೆಳಕಿಗೆ ಬಂದಿದೆ. ದೈವಸ್ಥಾನದ ಬೀಗ ಮುರಿದು ಕಾಣಿಕೆ ಡಬ್ಬಿಯನ್ನು ಕಳವುಗೈದಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮನೋರಂಜನೆ