
ಲೋಕಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಲೋಕಸಭೆಯಲ್ಲಿ ಬಹುಮತ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ.
ನೂತನ ಸರಕಾರದಲ್ಲಿ JD(S) ನಾಯಕ H D ಕುಮಾರಸ್ವಾಮಿ ಅವರು ಕೃಷಿ ಸಚಿವರಾಗುತ್ತಾರೆ ಎಂಬ ಕೆಲವು ವಲಯಗಳಲ್ಲಿ ಊಹಾಪೋಹಗಳ ಬಗ್ಗೆ, ಇತರ ಹಲವಾರು ಜೆಡಿ (ಎಸ್) ನಾಯಕರು ಇದೇ ರೀತಿಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ, ಈ ಬಗ್ಗೆ JD(S) ನಾಯಕ H D ಕುಮಾರಸ್ವಾಮಿ ತಮ್ಮ ಪಕ್ಷದ ಆಸಕ್ತಿ ಕೃಷಿ ಇಲಾಖೆಯಲ್ಲಿದೆ ಎಂದು ಒಪ್ಪಿಕೊಂಡಿದ್ದು, “ಏನು ನಿರ್ಧಾರಗಳು ಆಗುತ್ತವೆ ಎಂಬುದನ್ನು ನೋಡೋಣ.”ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷದ ಹಿತಾಸಕ್ತಿ ಕೃಷಿ ಇಲಾಖೆಯಲ್ಲಿದೆ. ಮೊದಲಿನಿಂದಲೂ ನಮ್ಮ ಹೋರಾಟ ರೈತ ಸಮುದಾಯಕ್ಕೆ ಒಳಿತನ್ನು ಮಾಡುವತ್ತ ಸಾಗಿದೆ ಎಂದು ಇಂದಿನ ಎನ್ಡಿಎ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ಆಗಮಿಸಿದ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ಈ ಹಿಂದೆ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮಂಗಳವಾರ ಮಂಡ್ಯ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಗೆದ್ದಿದ್ದ ಕುಮಾರಸ್ವಾಮಿ, ಕೇಂದ್ರದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಕೃಷಿ ಖಾತೆಯನ್ನು ಹಿಡಿಯುವ ತಮ್ಮ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ.
ಬಿಜೆಪಿಯು 240 ಸ್ಥಾನಗಳನ್ನು ಗೆದ್ದುಕೊಂಡಿದ್ದು, 272 ಬಹುಮತಕ್ಕೆ ಕಡಿಮೆಯಾಗಿದೆ ಮತ್ತು ಸರ್ಕಾರ ರಚನೆಗೆ ಪಕ್ಷದ ನೇತೃತ್ವದ ಎನ್ಡಿಎಯಲ್ಲಿ ಮಿತ್ರಪಕ್ಷಗಳ ಬೆಂಬಲದ ಅಗತ್ಯವಿದೆ, 2019 ಮತ್ತು 2014 ರಲ್ಲಿ ಬಿಜೆಪಿ ಕ್ರಮವಾಗಿ 303 ಮತ್ತು 282 ಸ್ಥಾನ ಗೆದ್ದು ಸ್ವಂತವಾಗಿ ಬಹುಮತ ಹೊಂದಿತ್ತು.
