

ಈ ಸರಕಾರ ಬಡವರ ಸರಕಾರ , ಕಟ್ಟ ಕಡೆಯ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲ ಯೋಜನೆ ರೂಪಿಸಲಾಗಿದೆ.ದಿನದ 24 ಗಂಟೆಯೂ ಜನರ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಬದ್ಧನಾಗಿದ್ದೇನೆ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ವಿರಾಜ ಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ಹೇಳಿದ್ದಾರೆ .ಅವರು ಜ.27 ರಂದು ಕೊಡಗು ಜಿಲ್ಲಾಡಳಿದ ವತಿಯಿಂದ ಪೆರಾಜೆ ಯ ಅನ್ನ ಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು,


ಜಲಜೀವನ್ ಮೆಷಿನ್ ಯೋಜನೆಯಲ್ಲಿ ರೂಪಿತವಾದ ಕಾಮಗಾರಿ ಕಳಪೆಯಾಗಿರುವ ಸಂಶಯ ವ್ಯಕ್ತ ಪಡಿಸಿ ಉದ್ಘಾಟನೆ ನಿರಾಕರಿಸಿದ್ದಾಗಿ ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ತಿಳಿಸಿದರು
ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯ ಭಾಗವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆದೇಶದಂತೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಜನಸ್ಪಂದನಾ ಕಾರ್ಯಕ್ರಮವು ಶಾಸಕ ಪೊನ್ನಣ್ಣ ಹಾಗೂ ಕೊಡಗು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಾರ್ವಜನಿಕರಿಂದ ಅಹ್ವಾಲು ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಗಿ ಸುಮಾರು ಮುನ್ನೂರಕ್ಕು ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಘೋಷಣೆಯನ್ನು ಮಾಡಲಾಯಿತು.

ವಿವಿಧ ಹೋಬಳಿ ಮಟ್ಟದ ಫಲಾನುಭವಿಗಳು ಯೋಜನೆಗಳ ಪ್ರಯೋಜನ ಪಡೆದುಕೊಂಡರು.
ವೇದಿಕೆಯಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ರಾಜ್ , ಕೊಡಗು ಕಾರ್ಯನಿರ್ವಹಣಾಧಿಕಾರಿ ವರ್ಣೀತ್ ನೇಗಿ, ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನಾವಡೆ, ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಉಪಸ್ಥಿತರಿದ್ದರು,
ಶಿಕ್ಷಕ ಕುಮಾರ್ ಸಂಪಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು,
