ಶ್ರೀ ಹುಲಿಚಾಮುಂಡಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಶ್ರೀ ಹುಲಿಚಾಮುಂಡಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಶ್ರೀ ಹುಲಿ ಚಾಮುಂಡಿ ಮತ್ತು ಪರಿವಾರ ದೈವಗಳ ಕಾರಣಿಕ ಕ್ಷೇತ್ರ ಬದಿಬಾಗಿಲು ನೂಜಿಬಾಳ್ತಿಲ ಗ್ರಾಮ ಕಡಬ ತಾಲೂಕು ಇಲ್ಲಿಯ ವಾರ್ಷಿಕ ನೇಮೋತ್ಸವವು ದಿನಾಂಕ 15/02/2025 ಶನಿವಾರ ನಡೆಯಲಿದೆ.

ಅಂದು ಬೆಲೆಗೆ ಘಂಟೆ 7:30ರಿಂದ ಗಣಪತಿ ಹವನ ದೈವಗಳ ಶುದ್ದಿ ಕಲಶ ಅಭಿಷೇಕ, ದೈವಗಳಿಗೆ ತಂಬಿಲ ಸೇವೆ, ನಾಗರಕ್ತೇಶ್ವರಿ ಬನದಲ್ಲಿ ತಂಬಿಲ ಸೇವೆ ನಡೆಯಲಿದೆ. ಸಂಜೆ ಗಂಟೆ 6.00 ಕ್ಕೆ ದೈವಗಳ ಭಂಡಾರ ಇಳಿದು 7.30 ಅನ್ನ ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ಗಂಟೆ 8.30 ಕ್ಕೆ ಶ್ರೀ ಹುಲಿಚಾಮುಂಡಿ ದೈವದ ನೇಮ ನಡೆಯಲಿದೆ. ರಾತ್ರಿ 10.30ರಿಂದ ಕಾಡೆತ್ತಿ ಪಂಜುರ್ಲಿ ದೈವಗಳ ನೇಮ ನಡೆಯಲಿದೆ. ನಂತರ ಗುಳಿಗ ದೈವದ ನೇಮ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೈವಾಭಿಮಾನಿಗಳು ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಿ ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ದೈವಸ್ಥಾನದ ಮೊಕ್ತೇಸರರು ತಿಳಿಸಿರುತ್ತಾರೆ.

ಧಾರ್ಮಿಕ