
ಸ ರಿ ಗ ಮ ಪ ಸೀಸನ್ – 21 ರ ಸ್ಪರ್ಧಿ ಕಾರ್ತಿಕ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ರಕ್ತ ಕಣ್ಣೀರು ಚಿತ್ರದ ಸೂಪರ್ ಹಿಟ್ ಹಾಡು – “ಕಣ್ಣೀರಿದು ….. ರಕ್ತ ಕಣ್ಣೀರಿದು” ಹಾಡನ್ನು ಭಾವನೆ ಸಹಿತ ಅದ್ಭುತವಾಗಿ ಹಾಡಿದ್ದರು. ಆ ಹಾಡಿನ ಬಗ್ಗೆ ಮಾತನಾಡುತ್ತಾ ಸಂಗೀತ ಮಾಂತ್ರಿಕ ಸಾಧುಕೋಕಿಲಾ ಅವರು ಅನೇಕ ನೆನಪುಗಳನ್ನು ಹಂಚಿಕೊಂಡರು.


ಈ ಹಾಡನ್ನು ಮೊದಲಿಗೆ ಸಾಧು ಕೋಕಿಲಾ ಅವರೇ ಹಾಡಿದ್ದರಂತೆ. ಆದರೆ, ಹಾಡಿನಲ್ಲೊಂದು ಕಡೆ ಬರುವ ‘ಮಣ್ಣಾಗುವೆ’ ಎಂಬ ಪದವನ್ನು ಹಾಡುವಾಗ, ಅವರ ದನಿ ಹೆಣ್ಣಿನ ದನಿಯಂತೆ ಕೇಳುತ್ತಿತ್ತಂತೆ. ಅದಕ್ಕೆ ಅವರೇ ರಾಜೇಶ್ ಕೃಷ್ಣನ್ ಕೈಯಲ್ಲಿ ಹಾಡಿಸಿದರಂತೆ. ರಾಜೇಶ್ ಕೃಷ್ಣನ್ ಎಷ್ಟು ಅದ್ಭುತವಾಗಿ ಹಾಡಿದ್ದರೆಂದರೆ, ಉಪೇಂದ್ರ ಅವರು ಮೊದಲು ರೆಕಾರ್ಡ್ ಮಾಡಿದ್ದ ಸಾಧು ಅವರ ದನಿಯನ್ನೇ ಕೈಬಿಟ್ಟಿದ್ದರಂತೆ. ರಾಜೇಶ್ ಕೃಷ್ಣನ್ ಅವರನ್ನು “ಅತೃಪ್ತ ಆತ್ಮ” ಎಂದು ಕರೆಯುತ್ತಾ, ಅವರ ಶ್ರಮ ಮತ್ತು ಸಮರ್ಪಣಾ ಭಾವವನ್ನು ಹೊಗಳುತ್ತಾ ಹೇಳಿದ ಸಾಧು ಅವರು, ರಾಜೇಶ್ ಅದಾಗಲೇ ಹಾಡನ್ನು ರೆಕಾರ್ಡ್ ಮಾಡಿ ಮುಗಿಸಿದ್ದರೂ, ಆದರ ನಂತರವೂ ಅದರ ಇಂಪ್ರೋವೈಸೇಶನ್ ಬಗ್ಗೆ ಹಾಡಿ ತೋರಿಸಿದ್ದರಂತೆ.
ಇಂತಹ ಗಾಯಕರು ಕನ್ನಡದಲ್ಲಿರುವುದು ನಮ್ಮ ಹೆಮ್ಮೆ. ಹಾಗೆಯೇ ಅವರನ್ನು ಮನಸ್ಪೂರ್ವಕವಾಗಿ ಹೊಗಳುವ ಸಾಧು ಕೋಕಿಲಾರಂತಹ ದಿಗ್ಗಜರು ಇರುವುದು ಕನ್ನಡಾಂಬೆಯ ಕಿರೀಟದಲ್ಲಿರುವ ರತ್ನಗಳಂತೆ ಅಲ್ಲವೇ?