ಜೂ.10ಮತ್ತು 12 ರಂದು ಸುಳ್ಯದಲ್ಲಿ ಸಂಚಾರಿ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ.

ಜೂ.10ಮತ್ತು 12 ರಂದು ಸುಳ್ಯದಲ್ಲಿ ಸಂಚಾರಿ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ.

ಸುಳ್ಯದ ಜೂನಿಯರ್ ಕಾಲೇಜು ಬಳಿ ಶ್ರೀ ಸಂಚಾರಿ ಗುಳಿಗ ಕ್ಷೇತ್ರದ ಪ್ರತಿಷ್ಠಾ ಮಹೋತ್ಸವ ಜೂ.10 ರಿಂದ ಆರಂಭ ಗೊಂಡು ಜೂ.12 ರವರೆಗೆ ನಡೆಯಲಿದೆ.ಜೂ.3 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷ ರಘುನಾಥ್ ಶೆಟ್ಟಿ ಆಲ್‌ಸೀಸನ್ ಹಾಗೂ ಕಾರ್ಯದರ್ಶಿ ಮುರಳಿ ಮಾವಂಜಿ ಪತ್ರಿಕಾಗೋಷ್ಠಿ ನಡೆಸಿ ಮಹೋತ್ಸವ ದ ಕುರಿತು ವಿವರ ನೀಡಿದರು.
ಪೆರಾಜೆಯ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ
ಶ್ರೀ ದೈವದ ಪ್ರತಿಷ್ಠೆ ನಡೆಯುವುದು. ಜೂ.10 ರಂದು ಸಂಜೆ ಸುದರ್ಶನ ಹೋಮ, ಪ್ರೇತಬಾಧೆ ಉಚ್ಚಾಟನೆ. ಜೂ.11 ರಂದು ತಂತ್ರಿಗಳ ಆಗಮನ. ಸಂಜೆ ಸಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ ವಾಸ್ತಹೋಮ, ವಾಸ್ತುಬಲಿ, ಪ್ರಾಕಾರ ಬಲಿಪೂಜೆ, ಅನ್ನಸಂತರ್ಪಣೆ ನಡೆಯುವುದು. ಜೂ.12 ರಂದು ಬೆಳಗ್ಗೆ ಗಣಹೋಮ, ಕಲಶಪೂಜೆ, ಬೆಳಗ್ಗೆ 9-02 ಕ್ಕೆ ಕರ್ಕಾಟಕ ಲಗ್ನದಲ್ಲಿ ಶ್ರೀ ದೈವದ ಪ್ರತಿಷ್ಠೆ ಕಲಶಾಭಿಷೇಕ, ತಂಬಿಲಸೇವೆ,ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುವುದು.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನೋಣಪ್ಪ ಗೌಡ ಕಲ್ಕುದಿ ಮನೆ, ಜತೆಕಾರ್ಯದರ್ಶಿ ಲವಕುಮಾರ್ ಕನ್ನಡ ಕೋಶಾಧಿಕಾರಿ ಮಹಾಲಿಂಗನ್ ಬಿ, ಗೌರವ ಸಲಹೆಗಾರರಾದ ದಯಾನಂದ ಹೊದ್ದೆಟ್ಟಿ, ರಾಮಕೃಷ್ಣ ರಾವ್ ಇದ್ದರು.

ರಾಜ್ಯ