
ದುಬೈ ಫ್ರೀಮಿಯರ್ ಲೀಗ್ ನ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸುವ ಮುಖಾಂತರ ಸುಳ್ಯ ಕಾಣತ್ತಿಲದ ಶರತ್ ರೈ ಯವರು ಭರವಸೆಯ ಆಟಗಾರನಾಗಿ ಹೊರ ಹೊಮ್ಮಿದ್ದಾರೆ .
2 ತಿಂಗಳ ವರೆಗೆ ದುಬೈ ನಲ್ಲಿ ನಡೆಯುವ ಪಂದ್ಯಾವಳಿ ಯಲ್ಲಿ ಭಾರತ ,ಪಾಕಿಸ್ತಾನ, ಅಫ್ಘಾನಿಸ್ತಾನ್, ಶ್ರೀಲಂಕಾ ಬಂಗಾಲ ಸೇರಿದಂತೆ ಎಲ್ಲ ದೇಶಗಳ ಹಲವು ಆಟಗಾರರು ಭಾಗವಹಿಸುತ್ತಾರೆ. ಇದಲ್ಲದೆ ದುಬೈ, ಶಾರ್ಜಾ, ಅಜ್ಮಾನ್ ಶಾರ್ಜಾ,ಅಬುದಾಬಿ, ಒಮನ್, ಸೇರಿದಂತೆ ಹಲವು ಗಲ್ಫ್ ದೇಶದ ಆಟಗಾರರು ಭಾಗವಹಿಸಿದ್ದಾರೆ.ಇಂತಹ ಪಂದ್ಯಕೂಟದಲ್ಲಿ ಸುಳ್ಯದ ಶರತ್ ರೈ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಪ್ರಸ್ತುತ ಶರತ್ ರೈ ಯವರು ದುಬೈ ನಲ್ಲಿ ಖಾಸಗಿ ಕಂಪೆನಿ ಉದ್ಯೋಗಿ ಯಾಗಿದ್ದು ಬ್ಲ್ಯಾಕ್ ಟೈಗರ್ ನಡೆಸುವ ಟೂರ್ನಮೆಂಟ್ ನಡೆಸುವ RDCC ತಂಡದ ಪರವಾಗಿ ಕಳೆದ ಮೂರು ವರ್ಷಗಳಿಂದ ಆರಂಭಿಕ ದಾಂಡಿಗ ನಾಗಿ ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇವರು ಸುಳ್ಯ ಕಸಬಾ ಕಾಣತ್ತಿಲ ಕುಂಞಣ್ಣ ರೈ ಮತ್ತು ಸುನಂದಾ ರೈ ದಂಪತಿಗಳ ಪುತ್ರ.