ಕಡಬದ ವ್ಯಕ್ತಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತ್ಯು.

ಕಡಬದ ವ್ಯಕ್ತಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತ್ಯು.

ಕಡಬ: ಕಡಬ ಮರ್ದಾಳದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಹೃದಯಾಘಾತದಿಂದ
ಮೃತಪಟ್ಟ ಬಗ್ಗೆ ಏಪ್ರಿಲ್ 11 ರಂದು
ವರದಿಯಾಗಿದೆ.ಮೃತಪಟ್ಟ ವ್ಯಕ್ತಿಯನ್ನು ಕಡಬ ಮರ್ದಾಳ
ನಿವಾಸಿ ಶಫೀಕ್(40) ಎಂದು ಗುರುತಿಸಲಾಗಿದೆ.
ಇವರು ಬೆಂಗಳೂರಿನ ಯಲಹಂಕದ ಸೂಪರ್ ಮಾರ್ಕೆಟ್’ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ಬೆಳಗ್ಗೆ ಎದ್ದವರು, ಎದೆನೋವು ಎಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದಾದರೂ,ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಅಂತಿಮ ಎಲ್ಲಾ ತಯಾರಿ ನಡೆಸುತ್ತಿದ್ದು ಬೆಂಗಳೂರಿನಿಂದ ಮೃತದೇಹವನ್ನು ಆಂಬ್ಯೂಲೆನ್ಸ್ ಮೂಲಕ ಊರಿಗೆ ತರಲಾಗುತ್ತಿದೆ.
ಮೃತರು ಹೆಂಡತಿ ಮತ್ತು ನಾಲ್ಕು ಮಕ್ಕಳನ್ನು
ಅಗಲಿದ್ದಾರೆ.

ರಾಜ್ಯ